ಗಂಗೊಳ್ಳಿ, ಆ.14: ಸ್ವಾತಂತ್ರ್ಯವನ್ನು ಸ್ವೇಚ್ಛೆ ಎಂದುಕೊಳ್ಳುವುದು ಅಕ್ಷರಶ ತಪ್ಪು. ಇಂದಿನ ವಿದ್ಯಾರ್ಥಿಗಳು ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತುಕೊಂಡು ಸಹನೆ ಸಹಬಾಳ್ವೆ ಗೌರವ ಮೊದಲಾದ ಮೌಲ್ಯಗಳ ಜೊತೆ ಬದುಕನ್ನು ಸಾಗಿಸಿದಾಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಎಂದು ಗಂಗೊಳ್ಳಿಯ ನಿವೇದಿತಾ ಶಿಶುಮಂದಿರದ ಸದಸ್ಯೆ ಸವಿತಾ ಯು ದೇವಾಡಿಗ ಅಭಿಪ್ರಾಯಪಟ್ಟರು. ಅವರು ಸ್ವಾತಂತ್ರ್ಯ ಮಹೋತ್ಸವದ ಪೂರ್ವಭಾವಿಯಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್. ವಿ ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ಆಯಿಷಾ ಮೆಹರೀನ್, ಅಜ್ರಾ ಅನ್ವರ್ ಆಲಿ, ಶಿವಾನಿ ಮತ್ತು ಪ್ರಾರ್ಥನಾ ಪೈ ಸ್ವಾತಂತ್ರ್ಯೋತ್ಸವದ ಕುರಿತಂತೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಮಾನ್ಯ, ಸಹನಾ ದಾಸ್, ದೀಪಾಲಿ ಮತ್ತು ಸಾನಿಕ ಎಸ್ ಪೂಜಾರಿ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಎಸ್. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಅದಿತಿ ಎಸ್ ಖಾರ್ವಿ ಸ್ವಾಗತಿಸಿ, ಅಭಿಜ್ಞಾ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ನವಮಿ ವಂದಿಸಿದರು.




By
ForthFocus™