Saturday, October 24, 2026
Saturday, October 24, 2026

ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆ: ಇಂಟರಾಕ್ಟ ಪದಗ್ರಹಣ

ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆ: ಇಂಟರಾಕ್ಟ ಪದಗ್ರಹಣ

Date:

ಪಟ್ಲ, ಆ.4: ರೂರಲ್ ಎಜುಕೇಶನ್ ಸೊಸೈಟಿಯ ಆಶ್ರಿತ ವಿದ್ಯಾ ಸಂಸ್ಥೆಯಾದ ಯುಎಸ್ ನಾಯಕ್ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷದ ಶಾಲಾ ಇಂಟರಾಕ್ಟ ಕ್ಲಬ್ ನ ಪದ ಪ್ರಧಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾ ಶೆಟ್ಟಿ ಜಗತ್ತಿನ ಅತ್ಯಂತ ಶ್ರೇಷ್ಠ ಮೌಲ್ಯವೆಂದರೆ ‘ನಿಸ್ವಾರ್ಥ ಸೇವೆ’. ಈ ಮೌಲ್ಯಗಳನ್ನು ಬೆಳಸುತ್ತಿರುವ ಉಡುಪಿ ರೋಟರಿಯ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿಗಳಲ್ಲಿ ಈ ಮನೋಭಾವ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಾಯಕವಾಗಿದೆ.. ಇದರ ಪ್ರಯೋಜನವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಉಡುಪಿ ರೋಟರಿಯ ಅಧ್ಯಕ್ಷ ಜೆ ಗೋಪಾಲಕೃಷ್ಣ ಪ್ರಭು ಇಂಟರಾಕ್ಟ್ ಪದ ಪ್ರಧಾನ ಮಾಡಿ ಶುಭ ಕೋರಿದರು. ಉಡುಪಿ ರೊಟರಿಯ ಇಂಟರಾಕ್ಟ್ ಚೇರ್ಮನ್ ಶುಭಲಕ್ಷ್ಮೀ ಇಂಟರಾಕ್ಟ್ ಕ್ಲಬ್ ಮಾಡಬೇಕಾದ ಕಾರ್ಯಚಟುವಟಿಕೆಗಳ ಮಾರ್ಗದರ್ಶನ ಮಾಡಿ ನೂತನ ತಂಡಕ್ಕೆ ಶುಭ ಕೋರಿದರು. ಡಾ. ಕೆ ಸುರೇಶ್ ಶೆಣೈ ರಸ್ತೆ ಸುರಕ್ಷೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ನಿಕಟಪೂರ್ವ ಶಾಲಾ ಇಂಟರಾಕ್ಟ್ ಅಧ್ಯಕ್ಷ ಪ್ರದ್ಯುಮ್ನ ಸ್ವಾಗತಿಸಿ ಕಾರ್ಯದರ್ಶಿ ರೇಖಾ ಗತ ವರ್ಷದ ವರದಿ ಮಂಡಿಸಿದರು. ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ ವಂದಿಸಿದರು. ವಿದ್ಯಾರ್ಥಿನಿ ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಇಂಟರಾಕ್ಟ್ ಕೋ ಆರ್ಡಿನೇಟರ್ ದೀಪಾ ಕಾರ್ಯಕ್ರಮ ಸಂಯೋಜಿಸಿದರು. ಶಾಲೆಯ ಗುರೂಜಿ -ಮಾತಾಜಿಯವರು ಉಡುಪಿ ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುರೋಪ್‌ಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ: ರಕ್ಷಣಾ ಕಾರ್ಯದರ್ಶಿ

ನವದೆಹಲಿ, ಅ.24: ಯುರೋಪಿಯನ್ ಒಕ್ಕೂಟದ 'ರೀ-ಆರ್ಮ್ ಯುರೋಪ್' ಉಪಕ್ರಮದ ಅಡಿಯಲ್ಲಿ ರಕ್ಷಣಾ...

ನನ್ನ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ವೀಡಿಯೋ ಸಂಪೂರ್ಣ ಸುಳ್ಳು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಅ.24: ನನ್ನ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ವೀಡಿಯೋ ಸಂಪೂರ್ಣ...

ಡಿಸೆಂಬರ್ ಅಂತ್ಯದೊಳಗೆ ಶಿವಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ, ಅ.24: ಬಹಳ ದಿನಗಳಿಂದ ನೆನೆಗುದಿಗೆಗೆ ಬಿದ್ದಿರುವ ಶಿವಪುರ ಪಂಚಾಯತ್ ಕಡೆಯಿಂದ...

ಹೊಸ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಮುಂದೆ ಬರುವ ಉದ್ಯಮಿಗಳಿಗೆ ಮೂಲಸೌಕರ್ಯ ಒದಗಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ಅ.24: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದೆ...
error: Content is protected !!