Monday, October 19, 2026
Monday, October 19, 2026

ಯಕ್ಷಗಾನ ಕಲಾರಂಗ: ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ

ಯಕ್ಷಗಾನ ಕಲಾರಂಗ: ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ

Date:

ಉಡುಪಿ, ಆ.೩: ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಆಜೀವ ಸದಸ್ಯರು, ದಾನಿಗಳೂ ಆದ ವೇದಮೂರ್ತಿ ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪುರೋಹಿತರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಭಟ್, ಸಂಸ್ಥೆಯ ಸದಸ್ಯರಾದ ಶಶಿಕಾಂತ ಭಟ್, ನವೀನ ಐತಾಳ್, ಶ್ರೀಶ ಆಚಾರ್, ಕೃಷ್ಣಮೂರ್ತಿ ಆಚಾರ್ಯ, ಸತ್ಯನಾರಾಯಣ ಹೆಬ್ಬಾರ್, ಸತ್ಯನಾರಾಯಣ ಭಟ್ ಸಹಕರಿಸಿದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತಿಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ಟರು ಸತ್ಯನಾರಾಯಣ ಕತೆಯ ಮಹತ್ತ್ವವನ್ನು ವಿವರಿಸಿ ಎಲ್ಲಾ ಕಾರ್ಯಕರ್ತರನ್ನು ಹರಸಿದರು. ವಿದ್ವಾನ್ ಭಾಸ್ಕರ ಭಟ್ಟರನ್ನು ಸೂರು ನೂರರ ಸಡಗರಲ್ಲಿ ಮನೆಯ ಪ್ರಾಯೋಜಕತ್ವ ವಹಿಸಿದವರಿಗೆ ಕೊಡಮಾಡಿದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೀತಾರಾಮ ಭಟ್ಟರು ಸಮರ್ಥ ನಾಯಕತ್ವ, ಅರ್ಪಣಾಭಾವದ ಕಾರ್ಯಕರ್ತರ ಅನನ್ಯ ಸಾಧನೆಗೆ ಶುಭ ಹಾರೈಸಿ ಅಭಿನಂದಿಸಿದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಸಂಸ್ಥೆ ಮಾಡುತ್ತಿರುವ ಕೆಲಸ ನೋಡಿ ಕೆಲವೊಮ್ಮೆ ನಮಗೇ ಆಶ್ಚರ್ಯವಾಗುತ್ತದೆ. ದಾನಿಗಳು ನಮ್ಮ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ನೀಡುತ್ತಿರುವ ಸಹಕಾರಕ್ಕೆ ವಿಸ್ಮಿತರಾಗುತ್ತೇವೆ. ಅವರ ನಿರೀಕ್ಷೆ ಹುಸಿಗೊಳಿಸದಿರುವ ಹೊಣೆಗಾರಿಕೆ ನಮ್ಮ ಮೇಲಿದೆ. ಆ ಕಾರಣದಿಂದಲೇ ಕೆಲವೊಮ್ಮೆ ಆತಂಕವೂ ಆಗುತ್ತದೆ. ಸಂಸ್ಥೆಯ ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಮೂರನೆಯ ವ್ಯಕ್ತಿಯೊಬ್ಬರು ಹರಕೆಹೊತ್ತ ಸಂದರ್ಭ ಇರಲಿಕ್ಕಿಲ್ಲ. ಕಲಾರಂಗದ ಹಲವು ಅನನ್ಯ ಘಟನೆಗಳಲ್ಲಿ ಇದೂ ದಾಖಲಾಗಬೇಕಾದುದು. ಸೀತಾರಾಮ ಭಟ್ಟರು ಶುಭ ಆಶೀರ್ವಾದದೊಂದಿಗೆ ಎಲ್ಲ ಕಾರ್ಯಕರ್ತರಿಗೆ ಉಡುಗೊರೆ ನೀಡಿ ಋಣಭಾರ ಹೆಚ್ಚಿಸಿದ್ದಾರೆ, ಅವರಿಗೆ ನಾವೆಲ್ಲ ಕೃತಜ್ಞರಾಗಿದ್ದೇವೆ ಎಂದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!