Sunday, September 27, 2026
Sunday, September 27, 2026

ಕಾರ್ಕಳ ಜ್ಞಾನಸುಧಾ: ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಚಟುವಟಿಕೆಗಳ ಉದ್ಘಾಟನೆ

ಕಾರ್ಕಳ ಜ್ಞಾನಸುಧಾ: ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಚಟುವಟಿಕೆಗಳ ಉದ್ಘಾಟನೆ

Date:

ಕಾರ್ಕಳ, ಜು.12: ಸಮಾಜ ಸೇವೆಯೇ ಶ್ರೇಷ್ಠ ಸೇವೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಮಾನವೀಯತೆ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಅತ್ಯುತ್ತಮ ವೇದಿಕೆ ರಾಷ್ಟ್ರೀಯ ಸೇವಾಯೋಜನೆಯಾಗಿದೆ ಎಂದು ಉದ್ಯಮಿ ವಿಜಯ್ ಶೆಟ್ಟಿ ಹೇಳಿದರು. ಅವರು ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2026-27ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನೋತಜ್ಞರಾದ ಡಾ. ಪ್ರಸನ್ನ ಹೆಗ್ಡೆ ಮಾತನಾಡಿ, ನನಗಾಗಿ ಅಲ್ಲ ನಿನಗಾಗಿ ಎಂಬ ಎನ್.ಎಸ್.ಎಸ್‌ನ ಧ್ಯೇಯವಾಕ್ಯವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸೇವೆಗೆ ಅರ್ಥ ಬರುತ್ತದೆ. ಸೇವೆ ಎಂಬುದು ಪ್ರಶಸ್ತಿಗಾಗಿ ಮಾಡುವ ಕೆಲಸವಲ್ಲ. ಸಮಾಜಕ್ಕೆ ನೀಡುವ ನಿಸ್ವಾರ್ಥ ಸೇವೆಯು ರಾಷ್ಟ್ರದ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆಯು ಸಮಾಜದ ಆಶಾಕಿರಣವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣದ ಮುಖ್ಯ ನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ವಹಿಸಿದ್ದರು. ಉಪಪ್ರಾಂಶುಪಾಲರಾದ ಸಾಹಿತ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರ, ಲೆ.ಮಂಜುನಾಥ್ ಮುದೂರು, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಪ್ರಸಾದ್ ಆಚಾರ್ಯ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಉಪಸ್ಥಿತರಿದ್ದರು. ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಮುಖ್ಯ ಸಂಯೋಜನಾಧಿಕಾರಿ ಶೈಲೇಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ನಾಯಕರಾದ ಧನುಶ್ ಚೌಟ ಪ್ರಮಾಣ ವಚನ ಬೋಧಿಸಿ ಹಾಗೂ ಅನ್ವಿತಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!