Monday, October 5, 2026
Monday, October 5, 2026

ಶಾಸಕರಿಂದ ನಗರದ ಪ್ರಮುಖ ತೋಡುಗಳ ಹೂಳು ತೆರವು ಕಾಮಗಾರಿ ಪರಿಶೀಲನೆ

ಶಾಸಕರಿಂದ ನಗರದ ಪ್ರಮುಖ ತೋಡುಗಳ ಹೂಳು ತೆರವು ಕಾಮಗಾರಿ ಪರಿಶೀಲನೆ

Date:

ಉಡುಪಿ, ಜೂ.3: ಉಡುಪಿ ನಗರಸಭಾ ವ್ಯಾಪ್ತಿಯ ಕಡಿಯಾಳಿ, ಗುಂಡಿಬೈಲು, ಬನ್ನಂಜೆ ವಾರ್ಡಿನ ಪ್ರಮುಖ ತೋಡುಗಳ ಹೂಳು ತೆರವು ಸ್ಥಳಗಳಿಗೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃತಕ ನೆರೆ ತಪ್ಪಿಸಲು ತೋಡುಗಳ ಹೂಳು ತೆರವು ಈಗಾಗಲೇ ನಡೆಯುತ್ತಿದ್ದು ಬಾಕಿ ಇರುವ ತೋಡುಗಳ ಹೂಳು ತಕ್ಷಣ ತೆರವು ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.

ಕಡಿಯಾಳಿ, ಕಲ್ಸಂಕ, ಗುಂಡಿಬೈಲು, ಮಠದಬೆಟ್ಟು, ಬನ್ನಂಜೆ ಗರಡಿ ಬಳಿಯ ತೋಡುಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ಶೇಖರಣೆಯಾಗಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದ್ದು, ಈಗಾಗಲೇ ಅತೀ ಶೀಘ್ರದಲ್ಲಿ ಮಳೆ ಪ್ರಾರಂಭವಾಗಲಿದ್ದು ಆದ್ಯತೆಯ ಮೇರೆಗೆ ಹೂಳು ತೆರವಿಗೆ ಕ್ರಮ ವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ನಗರಸಭೆ ಮಾಜಿ ಸದಸ್ಯರಾದ ಹರೀಶ್ ಶೆಟ್ಟಿ, ಹರೀಶ್ ರಾಮ್ ಬನ್ನಂಜೆ, ಸ್ಥಳೀಯ ಮುಖಂಡರಾದ ಸತೀಶ್ ಕುಲಾಲ್ ಕಡಿಯಾಳಿ, ಆನಂದ ಮಠದಬೆಟ್ಟು, ಉದಯ ಮಠದಬೆಟ್ಟು, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಪರಿಸರ ಅಧಿಕಾರಿ ರವಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಜಾನಕಿ ನಮನ’

ಉಡುಪಿ, ಅ.4: ಉಡುಪಿಯ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯದಲ್ಲಿ ಕರ್ಣಾಟಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತ ಭೇಟಿ

ಕಾಪು, ಅ.4: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ...

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಮಣಿಪಾಲ, ಅ.4: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ...
error: Content is protected !!