ನಿಟ್ಟೆ, ಏ.12: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಪದವಿಪೂರ್ವ) ಮಾರ್ಚ್ 2026ರಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ – 1, ಇದರಲ್ಲಿ ಡಾ. ಎನ್. ಎಸ್. ಎ. ಎಂ. ಪದವಿಪೂರ್ವ ಕಾಲೇಜು ನಿಟ್ಟೆಗೆ ರಾಜ್ಯ ಮಟ್ಟದಲ್ಲಿ 4 ರ‍್ಯಾಂಕ್‌ಗಳು ಲಭಿಸಿವೆ. ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಅಮೃತಾ ಕಾಮತ್ 600ರಲ್ಲಿ 596 ಅಂಕಗಳೊಂದಿಗೆ ರಾಜ್ಯ ಮಟ್ಟಕ್ಕೆ 5ನೇ ರ‍್ಯಾಂಕ್ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಆಡ್ಲಿನ್ ವಿಯಾನಾ ಮಥಾಯಸ್ 600ರಲ್ಲಿ 593 ಅಂಕಗಳೊಂದಿಗೆ ರಾಜ್ಯ ಮಟ್ಟಕ್ಕೆ 7ನೇ ರ‍್ಯಾಂಕ್, ನಿಧಿ ದೀಪಕ್ ಮೆಂಡನ್ 600ರಲ್ಲಿ 591ಅಂಕಗಳೊಂದಿಗೆ 9ನೇ ರ‍್ಯಾಂಕ್ ಮತ್ತು ವರ್ಷಾ ಎಸ್. ಭಂಡಾರಿ 600ರಲ್ಲಿ 590 ಅಂಕಗಳೊಂದಿಗೆ 10ನೇ ರ‍್ಯಾಂಕನ್ನು ಗಳಿಸಿರುತ್ತಾರೆ. ಇದರೊಂದಿಗೆ ವಾಣಿಜ್ಯ ವಿಭಾಗದ ಪ್ರತಿಷ್ಠಾ ಪ್ರಭು 600ರಲ್ಲಿ 589 ಮತ್ತು ಕು. ನಂದಿನಿ ಎ. ಶೆಟ್ಟಿ 600ರಲ್ಲಿ 585 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾದ 278 ವಿದ್ಯಾರ್ಥಿಗಳಲ್ಲಿ 146 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಮತ್ತು 120 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದು, ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 99.4% ಮತ್ತು ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿರುತ್ತದೆ. ಉತ್ತಮ ಫಲಿತಾಂಶವನ್ನು ಸಂಸ್ಥೆಗೆ ಒದಗಿಸಿಕೊಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಸಿಬ್ಬಂದಿ ವೃಂದ ಅಭಿನಂದಿಸಿದ್ದಾರೆ.




By
ForthFocus™