Monday, April 6, 2026
Monday, April 6, 2026

ಕಲುಷಿತ ನೀರನ್ನು ಚರಂಡಿಗೆ ಬಿಡದಂತೆ ಉಡುಪಿ ನಗರಸಭೆ ಸೂಚನೆ

ಕಲುಷಿತ ನೀರನ್ನು ಚರಂಡಿಗೆ ಬಿಡದಂತೆ ಉಡುಪಿ ನಗರಸಭೆ ಸೂಚನೆ

Date:

ಉಡುಪಿ, ಏ.5: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡಗಳ ಕಲುಷಿತ ನೀರನ್ನು ಮಳೆ ನೀರು ಹರಿಯಲು ನಿರ್ಮಿಸಿರುವ ಚರಂಡಿಗೆ ಬಿಡದಂತೆ ನಗರಸಭೆಯಿಂದ ಸೂಚಿಸಲಾಗಿರುತ್ತದೆ. ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾದ ಕಲುಷಿತ ನೀರನ್ನು ತಮ್ಮ ಸ್ವಂತ ಜಾಗದಲ್ಲೇ ಇಂಗುಗುಂಡಿ ನಿರ್ಮಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಯಮವನ್ನು ನಿರ್ಲಕ್ಷಿಸಿ ಚರಂಡಿಗೆ ಕಲುಷಿತ ನೀರು ಬಿಟ್ಟರೆ ಪುರಸಭೆ ಕಾಯಿದೆ ಅನ್ವಯ ಕ್ರಮ ಜರುಗಿಸಲಾಗುವುದು. ದಿನನಿತ್ಯ ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು, ಗಿಡಗಂಟಿಗಳ ಗೆಲ್ಲುಗಳನ್ನು ಕಡಿದು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿ ಎಸೆಯುತ್ತಿರುವುದು ಕಂಡು ಬಂದಿದ್ದು, ಇದರಿಂದ ನೈರ್ಮಲ್ಯ ಹಾಗೂ ನಗರ ಸ್ವಚ್ಛತೆಗೆ ತೊಡಕಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತಮ್ಮ ಮನೆಯ ವಠಾರದಲ್ಲಿ ಕಾಂಪೋಸ್ಟ್ ಮಾಡಿಕೊಳ್ಳಲು ಸೂಕ್ತವಾಗಿರುತ್ತದೆ. ಈ ಬಗ್ಗೆ ಸಮಸ್ಯೆಗಳಿದ್ದಲ್ಲಿ ತ್ಯಾಜ್ಯವನ್ನು ನಗರಸಭೆಯ ತ್ಯಾಜ್ಯ ಸಂಗ್ರಹಣೆಯ ವಾಹನಕ್ಕೆ ನೀಡಬೇಕು. ಹೊರತಾಗಿ ಯಾವುದೇ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಾಯಿ ಮಕ್ಕಳ ಆಸ್ಪತ್ರೆಗೆ ಪೋರ್ಟಬಲ್ ಎಕ್ಸ್ ರೇ ಮತ್ತು ಡಿಜಿಟಲ್ ರೇಡಿಯೋಗ್ರಫಿ ಉಪಕರಣ ಹಸ್ತಾಂತರ

ಉಡುಪಿ, ಏ.5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ನೀಲನಕಾಶೆ ಸಿದ್ಧಪಡಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ಏ.5: ಪ್ರಕೃತಿದತ್ತ ಸಹಜ ಸೌಂದರ್ಯ ಹೊದಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ...

ರೈಲ್ವೆ ಪ್ರತಿದಿನ 25,000 ರೈಲುಗಳೊಂದಿಗೆ ಸಂಪರ್ಕವನ್ನು ಪರಿವರ್ತಿಸುತ್ತಿದೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ, ಏ.5: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೆಯು...

ಕ್ರಿಯೇಟಿವ್: ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ

ಕಾರ್ಕಳ, ಏ.5: 2026 -27ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ...
error: Content is protected !!