ಹಿರಿಯಡಕ, ಫೆ.27: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶದ ವತಿಯಿಂದ ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಉದ್ಯೋಗ ಮೇಳ’ ಆಯೋಜಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಯುನೈಟೆಡ್ ಟೊಯೋಟಾದ ಕ್ಲಸ್ಟರ್ ಹೆಡ್ ಶರಣ್ ಜೋಸ್ ಅಮ್ಮಣ್ಣ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಹೆಚ್.ಆರ್ ಮೇಘಚಂದ್ರ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ ಇವರು ವಹಿಸಿದ್ದರು.
ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ ಎಂ ಇವರು ಸ್ವಾಗತಿಸಿ, ಅಪರ್ಣ ಕೆ ಯು ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ನಂದೀಶ್ ಕುಮಾರ್ ಕೆ ಸಿ ಇವರು ವಂದಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ನಿಶ್ಚಿತ ಎಸ್ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉಳಿದ ಉದ್ಯೋಗಾರ್ಥಿಗಳಿಗಾಗಿ ಸಂದರ್ಶನಗಳನ್ನು ನಡೆಸಿದ ನಂತರ ಕಾಲೇಜಿನ ಸಿಬ್ಬಂದಿ ವರ್ಗದವರಿಗೆ ಕೆಲವು ಚಟುವಟಿಕೆಗಳ ಮೂಲಕ ಮನರಂಜಿಸಿದರು. ಯುನೈಟೆಡ್ ಟೊಯೋಟಾದ ವತಿಯಿಂದ ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.




By
ForthFocus™