Wednesday, February 18, 2026
Wednesday, February 18, 2026

ಬ್ರಹ್ಮಾವರ: ಅಂತರ್ ಜಿಲ್ಲಾ ಹಿರಿಯರ ಟೆನಿಸ್ ಪಂದ್ಯಾಟ ಉದ್ಘಾಟನೆ

ಬ್ರಹ್ಮಾವರ: ಅಂತರ್ ಜಿಲ್ಲಾ ಹಿರಿಯರ ಟೆನಿಸ್ ಪಂದ್ಯಾಟ ಉದ್ಘಾಟನೆ

Date:

ಬ್ರಹ್ಮಾವರ, ಫೆ.15: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಬೈಕಾಡಿ ಸಾಲ್ವದೋರ್ ನೊರೋನ್ಹ ಅವರ ಸ್ಮರಣಾರ್ಥ 16ನೇ ಪುರುಷರ ಅಂತರ್ ಜಿಲ್ಲಾ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು. ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಮಹೇಶ್ ಶೆಟ್ಟಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಪಂದ್ಯದಲ್ಲಿ ಸೋತರೂ ಕೂಡ ಧ್ರತಿಗೆಡದೆ ತನ್ನ ನ್ಯೂನತೆಯ ಬಗ್ಗೆ ತಿಳಿದುಕೊಂಡು ಮುಂದೆ ಗೆಲುವಿನತ್ತ ತನ್ನ ಚಿತ್ತವನ್ನು ಹರಿಸಬೇಕು ಎಂದು ಕರೆ ನೀಡಿದರು.

ಸ್ಪೋರ್ಟ್ಸ್ ಕ್ಲಬ್ಬಿನಲ್ಲಿ ಕ್ರೀಡಾಪಟುಗಳಿಗೆ ಇರುವ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ಇನ್ನೋರ್ವ ಅತಿಥಿ ಉದ್ಯಮಿ ಪ್ರಭಾಕರ್ ಕುಂದರ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಗೌರವಾಧ್ಯಕ್ಷರಾದ ಎಂ. ಚಂದ್ರಶೇಖರ್ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ಬಿಜು ಜಿ ನಾಯರ್ ಸ್ವಾಗತಿಸಿ, ಕಾರ್ಯದರ್ಶಿ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂ ಶ್ರಮಯೋಗಿ ಮಾನ್ ಧನ್ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ, ಫೆ.17: ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು...

ಹಿರಿಯಡಕ ಕಾಲೇಜು: ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಪರ್ಕಳ, ಫೆ.17: ಅಹಂಕಾರ ಕರಗಿ 'ನಾವು' ಎಂಬ ಭಾವನೆ ಬೆಳೆಸಿ, ಎಲ್ಲಾ...

ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ SZA; ಅಭಿಮಾನಿಗಳಿಗೆ ಅಚ್ಚರಿ

ಕೊಯಮತ್ತೂರು, ಫೆ.17: ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ...
error: Content is protected !!