Friday, April 17, 2026
Friday, April 17, 2026

ಜಿ.ಬಿ.ನ್. ಕ್ರಿಯೇಶನ್ಸ್ ಹಾಗೂ ಶ್ರೀ ದುರ್ಗಾ ಮ್ಯೂಸಿಕ್ ಮೀಟ್: ಲೈವ್ ಆರ್ಕೆಸ್ಟ್ರಾ; ಸಾಧಕರಿಗೆ ಸನ್ಮಾನ

ಜಿ.ಬಿ.ನ್. ಕ್ರಿಯೇಶನ್ಸ್ ಹಾಗೂ ಶ್ರೀ ದುರ್ಗಾ ಮ್ಯೂಸಿಕ್ ಮೀಟ್: ಲೈವ್ ಆರ್ಕೆಸ್ಟ್ರಾ; ಸಾಧಕರಿಗೆ ಸನ್ಮಾನ

Date:

ಉಡುಪಿ, ಜ.22: ಶ್ರೀ ಶಿರೂರು ಮಠದ ಪರ್ಯಾಯದ ಅಂಗವಾಗಿ ಜಿ.ಬಿ.ನ್. ಕ್ರಿಯೇಶನ್ಸ್ ಹಾಗೂ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಇವರ ಆಶ್ರಯದಲ್ಲಿ ಲೈವ್ ಆರ್ಕೆಸ್ಟ್ರಾ ಕಾರ್ಯಕ್ರಮ ಯುಬಿ ಸ್ಕ್ವೇರ್ ಮುಂಭಾಗದಲ್ಲಿ ನಡೆಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಹರಿಪ್ರಸಾದ್ ರೈ ಚೇರ್ಮನ್ ಎಚ್. ಪಿ. ಆರ್. ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಬದ್ರಿನಾಥ್ ನಾಯರಿ, ರಾಘವೇಂದ್ರ, ಡಾ. ಭಾಸ್ಕರ್, ಡಾ. ಶಬರಿ, ಕೆ ಗಣೇಶ್ ಕುಮಾರ್ ಮಟ್ಟು ವಕೀಲರು, ಅನಿಲ್ ರಾಜ್, ರಾಜೇಶ್ ಹೆಗ್ಡೆ, ತೇಜಸ್ವಿನಿ ಅನಿಲ್ ರಾಜ್ ಉಪಸ್ಥಿತರಿದ್ದರು, ಕಾರ್ಯಕ್ರಮದ ಸಂಚಾಲಕರಾದ ನಂದಕಿಶೋರ ಕೆಮ್ಮಣ್ಣು ಸ್ವಾಗತಿಸಿದರು, ಪ್ರಾರ್ಥನೆಯನ್ನು ದಿನೇಶ್ ಕಡೆಕಾರ್ ನೆರವೇರಿಸಿದರು, ಸ್ವಾತಿ ಹಾಗೂ ಪ್ರವೀಣ್ ಕುಮಾರ್ ತೋನ್ಸೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಂಸಾಖ್ಯ ಯಕ್ಷಕಿರಣ ಕಲಾ ಪ್ರತಿಷ್ಠಾನ ಬೈಲೂರು ಉಡುಪಿ ಇದರ ಸದಸ್ಯರಾದ ಯಶಸ್ವಿ ಅಶೋಕ್ ಮತ್ತು ರಮ್ಯಾ ದೇಶಪಾಂಡೆ ಇವರಿಂದ “ಯಕ್ಷನಾಟ್ಯ” ಕಾರ್ಯಕ್ರಮ ನಡೆಯಿತು. ಸಂಗೀತ ಕಲಾವಿದರಾದ ಪ್ರಜ್ಞಾ ರಾವ್ ಕಟೀಲ್, ಹಾಗೂ ದೃತಿ ಶೆಟ್ಟಿ ಹಾಗೂ ವೈಷ್ಣವಿ ಭಟ್ ಇವರಿಗೆ ಸನ್ಮಾನಿಸಲಾಯಿತು. ಹೊರರಾಜ್ಯ ಹಾಗೂ ಮಂಗಳೂರು ಸ್ಥಳೀಯ ಸಂಗೀತ ಕಲಾವಿದರಾದ ಪ್ರಜ್ಞ ರಾವ್ ಕಟೀಲ್, ಅನುಕುಮಾರ್, ದಿನೇಶ್ ಕಡೆಕಾರ್, ಮಂಜುನಾಥ ಆಚಾರ್ಯ, ಸಚಿನ್ ಸಾಲಿಯಾನ್, ಅನಿಲ್ ರಾಜ್, ದೃತಿ ಶೆಟ್ಟಿ, ವೈಷ್ಣವಿ ಭಟ್ ಭಾಗವಹಿಸಿದ್ದರು. ವಾದ್ಯ ತಂಡದಲ್ಲಿ ಆನಂದ್ ಪೆರ್ಡೂರ್. ಹರೀಶ್ ಕೆ ಪೆರ್ಡೂರ್, ಸತೀಶ್ ಹಾವಂಜೆ, ಐವನ್ ರಿಚರ್ಡ್ ಡಿಸೋಜಾ, ಸ್ವರಾಜ್ ಸಾಲಿಯಾನ್ ಮಂಗಳೂರು ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

20,400 ಮೆಟ್ರಿಕ್ ಟನ್ ಎಲ್‌ಪಿಜಿಯೊಂದಿಗೆ ದೀನ್‌ದಯಾಳ್ ಬಂದರಿಗೆ ತಲುಪಿದ ಭಾರತೀಯ ನೌಕೆ ಜಗ್ ವಿಕ್ರಮ್

ಅಹಮದಾಬಾದ್, ಏ.16: ಭಾರತೀಯ ಧ್ವಜ ಹೊತ್ತ ಎಲ್‌ಪಿಜಿ ನೌಕೆ ಎಂವಿ ಜಗ್...

ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ನವದೆಹಲಿ, ಏ.16: ಏ. 16 ಗುರುವಾರ ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ, ಮಹಾರಾಷ್ಟ್ರ,...

ಉಡುಪಿ ನಗರಸಭೆ: ವಿವಿಧ ಸೌಲಭ್ಯ – ಅರ್ಜಿ ಆಹ್ವಾನ

ಉಡುಪಿ, ಏ.16: ಉಡುಪಿ ನಗರಸಭೆಯ 2025-26 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿಯಡಿ...
error: Content is protected !!