Friday, March 6, 2026
Friday, March 6, 2026

ಸಾಹೇಬರಕಟ್ಟೆ: ದಂತ ವೈದ್ಯಕೀಯ ಶಿಬಿರ

ಸಾಹೇಬರಕಟ್ಟೆ: ದಂತ ವೈದ್ಯಕೀಯ ಶಿಬಿರ

Date:

ಕೋಟ, ಜ.21: ರೋಟರಿ ಕ್ಲಬ್ ಸಾಹೇಬರಕಟ್ಟೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ ಕೆಎಂಸಿ ಇದರ ವತಿಯಿಂದ ಸಾಹೇಬರಕಟ್ಟೆ ಗಾಂಧಿ ಪ್ರೌಢಶಾಲೆಯಲ್ಲಿ ದಂತ ವೈದ್ಯಕೀಯ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ನಿಯೋಜಿತ ಸಹಾಯಕ ಗವರ್ನರ್ ವಿಜಯಕುಮಾರ್ ಶೆಟ್ಟಿ, ಈ ರೀತಿಯ ಶಿಬಿರಗಳಿಂದ ಹಲ್ಲಿನ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ನಮ್ಮ ಆರೋಗ್ಯದಲ್ಲಿ ಹಲ್ಲಿನ ಆರೋಗ್ಯ ಕೂಡ ಬಹಳ ಅಗತ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ವರದರಾಜ್ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ಶಾನುಭಾಗ್, ಕೆಎಂಸಿಯ ಡಾ. ಅದಿತಿ ಬೋಸ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್, ಫೆಡರೇಶನ್ ಪೂರ್ವಾಧ್ಯಕ್ಷ ಮಧುಸೂದನ್ ಹೇರೂರು, ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಕಾರ್ಕಳ, ಮಾ.6: ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಾದ ಕಾರ್ಕಳ ಸರಕಾರಿ ಪದವಿಪೂರ್ವ...

ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ

ಪಟ್ನಾ, ಮಾ.6: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ...

ಭಾರತೀಯ ವಾಯುಪಡೆಯ ಸುಖೋಯ್ ವಿಮಾನ ಅಪಘಾತ; 2 ಸಾವು

ಆಂಗ್ಲಾಂಗ್, ಮಾ.6: ಅಸ್ಸಾಂನಲ್ಲಿ, ಜೋರ್ಹತ್ ವಾಯುನೆಲೆಯಿಂದ ಸುಮಾರು 60 ಕಿ.ಮೀ ದೂರದಲ್ಲಿ...
error: Content is protected !!