ಮಣಿಪಾಲ, ಜ.೧೦: ಕೆ.ಎಂ.ಸಿ. ಮಣಿಪಾಲ ಸಮುದಾಯ ವೈದ್ಯಕೀಯ ವಿಭಾಗದ ನೇತೃತ್ವದಲ್ಲಿ ಕೆ.ಎಂ.ಸಿ. ಇಂರ‍್ಯಾಕ್ಟ್ ಸಭಾಂಗಣದಲ್ಲಿ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌ಗಳು, ಶ್ವಾಸಕೋಶದ ತೊಂದರೆಗಳು ಹಾಗೂ ಮಾನಸಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವೈದ್ಯಕೀಯ ಮತ್ತು ಕಾರ್ಯಕ್ರಮ ದೃಷ್ಠಿಕೋನಗಳ ಕುರಿತು ನಿರಂತರ ವೈದ್ಯಕೀಯ ಶಿಕ್ಷಣದ ಅಡಿಯಲ್ಲಿ ಉಡುಪಿ ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ್ ಜಿ. ಹುಬ್ಬಳ್ಳಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಅಶೋಕ್ ಹೆಚ್. ಉಡುಪಿ ಜಿಲ್ಲಾ ಸರ್ಜನ್, ಡಾ. ಪ್ರಸಾದ್ ಎಸ್.ಎಸ್., ಸಹ ಡೀನ್, ಕೆ.ಎಂ.ಸಿ. ಮಣಿಪಾಲ, ಡಾ. ಚೆರಿಯನ್ ವರ್ಗೀಸ್, ಡೈರೆಕ್ಟರ್, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಾಹೆ ಮಣಿಪಾಲ ಹಾಗೂ ಡಾ. ಪ್ರೇಮಾನಂದ ಕೆ. ಕೆ.ಎಂ.ಸಿ. ವೀಕ್ಷಕರಾಗಿ ಉಪಸ್ಥಿತರಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿ ಈ ಅಸಾಂಕ್ರಮಿಕ ರೋಗಗಳು ಸಮುದಾಯದಲ್ಲಿ ಸುಮಾರು ಶೇಕಡಾ 75 ರಷ್ಟು ಜನರ ಸಾವಿಗೆ ಕಾರಣವಾಗುತ್ತಿವೆ. ಇದನ್ನು ನಿಯಂತ್ರಿಸಲು ಶೀಘ್ರ ರೋಗ ಪತ್ತೆ ಮತ್ತು ಚಿಕಿತ್ಸೆ ಅಗತ್ಯತೆಯೊಂದಿಗೆ ರೋಗಿಗಳ ಜೀವನ ಶೈಲಿ ಬದಲಾಯಿಸಲು ಮನವೊಲಿಸುವುದು ಅತೀ ಅಗತ್ಯವೆಂದು ಅಭಿಪ್ರಾಯಪಟ್ಟರು. ಪ್ರಾಧ್ಯಾಪಕರಾದ ಡಾ. ಮುರಳೀಧರ ಎಂ. ಕುಲಕರ್ಣಿಯವರು ಸ್ವಾಗತಿಸಿ, ಸಹ ಪ್ರಾಧ್ಯಾಪಕರಾದ ಡಾ. ಈಶ್ವರೀ ಕೆ. ವಂದಿಸಿದರು. ಡಾ. ರಕ್ಷಿತಾ ಆರ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ರೋಗಗಳ ನಿಯಂತ್ರಣ ಕುರಿತು ಡಾ. ಚರಿಯನ್ ವರ್ಗೀಸ್, ಡಾ. ಮುಖ್ಯಪ್ರಾಣ ಪ್ರಭು, ಡಾ. ಶ್ರವಣ್ ಕುಮಾರ್ ರೆಡ್ಡಿ, ಡಾ. ಮುರಳಿಧರ್ ಯಡಿಯಾಳ್ ಬಿ. ಡಾ. ಮುರಳೀಧರ್ ಎಂ. ಕುಲಕರ್ಣಿ, ಡಾ. ಸುರೇಶ್ ಪಿಳ್ಳೈ ಮಾಹಿತಿ ನೀಡಿದರು ಹಾಗೂ ಆ ಬಗ್ಗೆ ಗುಂಪು ಚರ್ಚೆ ನಡೆಸಿದರು. ಸಹ ಪ್ರಾಧ್ಯಾಪಕರಾದ ಡಾ. ಈಶ್ವರೀ ಕೆ. ಅವರು ಗುಂಪು ಚರ್ಚೆಯನ್ನು ನೆರವೇರಿಸಿದರು. ಕಾರ್ಯಗಾರದಲ್ಲಿ ಒಟ್ಟು 124 ವೈದ್ಯರು ಭಾಗವಹಿಸಿದ್ದರು.




By
ForthFocus™