ಉಡುಪಿ, ಜ.9: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2026 ನೇ ಸಾಲಿನ ಶ್ರೀ ಗುರು ನರಸಿಂಹ ದೇವರ ಜಾತ್ರಾ ಮಹೋತ್ಸವ ಜನವರಿ 16 ರಿಂದ ನಡೆಯಲಿದ್ದು, ಸಾಲಿಗ್ರಾಮ ರಥಬೀದಿ ಹೊರತುಪಡಿಸಿ ಉಳಿದ ಖಾಸಗಿ, ಎನ್.ಹೆಚ್, ಒಳಪೇಟೆ, ಸರ್ವೀಸ್ ರಸ್ತೆ, ರಥಬೀದಿ ಸೇರಿದಂತೆ ಇತರೇ ಸರ್ಕಾರಿ ಸ್ಥಳಗಳಲ್ಲಿ ಜಾತ್ರಾ ಪ್ರಯುಕ್ತ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವವರು ಜಾತ್ರೆ ಪ್ರಾರಂಭವಾಗುವ ಮೂರು ದಿನದ ಮುಂಚಿತವಾಗಿ ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಕಡ್ಡಾಯವಾಗಿ ಉದ್ಯಮದಾರರ ಭಾವಚಿತ್ರ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಅಥವಾ ರೇಷನ್ ಕಾರ್ಡ್ ನಕಲು ಪ್ರತಿ ನೀಡಿ, ಪಟ್ಟಣ ಪಂಚಾಯತ್ ವಿಧಿಸುವ ನಿಗದಿತ ಶುಲ್ಕ ಪಾವತಿಸಿ, ನಂತರ ಪಟ್ಟಣ ಪಂಚಾಯತ್ ಗುರುತಿಸಿದ ಸ್ಥಳಗಳಲ್ಲಿ ವ್ಯಾಪಾರ ನಡೆಸಬಹುದಾಗಿದೆ. ರಥಬೀದಿ ಹಾಗೂ ಖಾಸಗಿ ಜಾಗದಲ್ಲಿ ವ್ಯಾಪಾರ ನಡೆಸುವವರು ಪಟ್ಟಣ ಪಂಚಾಯತ್ ನಿಗಧಿಪಡಿಸಿರುವ ಘನತ್ಯಾಜ್ಯ ಶುಲ್ಕವನ್ನು ಪಾವತಿಸಬೇಕು ಹಾಗೂ ಸರಕಾರದಿಂದ ನಿಷೇಧಿಸಿರುವ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ವ್ಯಾಪಾರಸ್ಥರು ಉದ್ಯಮದಲ್ಲಿ ಬಳಕೆ ಹಾಗೂ ಮಾರಾಟ ಮಾಡಬಾರದು.
ಸಾರ್ವಜನಿಕರು ದೇವರ ಪೂಜೆಗೆ ಸಂಬಂಧಿಸಿದ ಹಣ್ಣುಕಾಯಿ ಸೇವೆಯನ್ನು ನೀಡಲು ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತರದೇ ಬಟ್ಟೆ, ಜೂಟ್, ಬೀಣಿ ಹಾಗೂ ಇತರೆ ಚೀಲದಲ್ಲಿ ತರುವುದರೊಂದಿಗೆ ಸಾಲಿಗ್ರಾಮ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನಾಗಿಸಲು ಸಹಕರಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™