ಉಡುಪಿ, ಜ.9: ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಪ್ರತೀ ಮಂಗಳವಾರ ದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಟ್ಟಣ ಪಂಚಾಯತ್ ಕೆಲಸಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಅಹವಾಲನ್ನು ಸ್ವೀಕರಿಸಲು ಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಅರ್ಜಿ ಬಗ್ಗೆ ಹಾಗೂ ಇತರೆ ದೂರು ಸಮಸ್ಯೆಗಳಿದ್ದಲ್ಲಿ ಮೇಲೆ ಸೂಚಿಸಿದ ದಿನದಂದು ಪಟ್ಟಣ ಪಂಚಾಯತ್ ಕಚೇರಿಗೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಸಾಲಿಗ್ರಾಮ ಪ.ಪಂ: ಪ್ರತೀ ಮಂಗಳವಾರದ ಸಾರ್ವಜನಿಕ ಅಹವಾಲು ಸಭೆ
ಸಾಲಿಗ್ರಾಮ ಪ.ಪಂ: ಪ್ರತೀ ಮಂಗಳವಾರದ ಸಾರ್ವಜನಿಕ ಅಹವಾಲು ಸಭೆ
Date:




By
ForthFocus™