ಉಡುಪಿ, ಜ.4: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ವತಿಯಿಂದ ಹೋಂ ಡಾಕ್ಟರ್ ಫೌಂಡೇಶನ್ ಇದರ ಸ್ವರ್ಗ ಉಚಿತ ಆಶ್ರಮ ಕೊಳಲಗಿರಿ ಉಡುಪಿ ಇಲ್ಲಿಗೆ ಭೇಟಿ ನೀಡಿ ಆಶ್ರಮಕ್ಕೆ ವೇದಿಕೆ ವತಿಯಿಂದ ಬೆಳಗಿನ ಉಪಹಾರ ವ್ಯವಸ್ಥೆ ಹಾಗೂ ಆಶ್ರಮಕ್ಕೆ ಬೇಕಾಗಿರುವಂತಹ ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆ, ಕಾಳು, ಎಣ್ಣೆ, ಬೆಲ್ಲ, ಹಣ್ಣು ಹಂಪಲುಗಳು ಹಾಗೆ ದಿನಬಳಕೆಯ ವಸ್ತುಗಳಾದ ಫಿನಾಯಿಲ್, ಟೂತ್ ಪೇಸ್ಟ್, ಸಾಬೂನು ಹಾಗೂ ಆಶ್ರಮಕ್ಕೆ ಅಗತ್ಯವಿರುವ ಇಡ್ಲಿ ತಯಾರಿಸುವ ಪಾತ್ರೆಯನ್ನು ನೀಡಲಾಯಿತು. ಆಶ್ರಮದ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಸ್ವಾಗತಿಸಿ ಆಶ್ರಮದ ಪರಿಚಯ ಮಾಡಿಕೊಟ್ಟರು.
ವೇದಿಕೆಯಲ್ಲಿ ಮೇಲೆ ಮಂಗಳಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ನಟರಾಜ ಪರ್ಕಳ, ಗೌರವಾಧ್ಯಕ್ಷರಾದ ಕೆ. ಪ್ರಕಾಶ್ ಶೆಣೈ, ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆ ಸದಸ್ಯರಾದ ಗಣೇಶ್ ಸಣ್ಣಕ್ಕಿಬೆಟ್ಟು, ಸಂದೀಪ್ ನಾಯ್ಕ್ ಕಬ್ಯಾಡಿ, ಗಜೇಂದ್ರ ಆಚಾರ್ಯ ಬಾಳ್ಕಟ್ಟ, ಗೋಪಿ ಹಿರೇಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಅನಂತರಾಮ್ ನಾಯಕ್ ಸಣ್ಣಕ್ಕಿಬೆಟ್ಟು, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು, ಸತೀಶ್ ಶೆಟ್ಟಿಗಾರ್, ಬಸವರಾಜ್ ನಡಿದಾರೆ ಉಪಸ್ಥಿತರಿದ್ದರು. ಡಾ. ಶಶಿಕಿರಣ್ ಶೆಟ್ಟಿ ಹಾಗೂ ಆಶ್ರಮದ ಮೇಲ್ವಿಚಾರಕ ಹರೀಶ್ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.




By
ForthFocus™