ಕುಂದಾಪುರ, ಜ.4: ಕುಂದಾಪುರ ಪುರಸಭಾ ವ್ಯಾಪ್ತಿಯ ಖಾರ್ವಿಕೇರಿ ಭಾಗದಲ್ಲಿ ನಡೆಯುತ್ತಿರುವ ರಿಂಗ್ ರಸ್ತೆ ಕಾಮಗಾರಿಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸಿದರು. ಫೆರ್ರಿ ರಸ್ತೆಯಿಂದ ಪ್ರಭಾಕರ್ ಟೈಲ್ಸ್ (ಹಂಚಿನ ಕಾರ್ಖಾನೆ) ತನಕ ಕಾಂಕ್ರೀಟ್ ರಸ್ತೆ ನಿರ್ಮಿಸುವ ಬಗ್ಗೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ರಿಂಗ್ ರಸ್ತೆ ಪ್ರಾರಂಭದಿಂದ ಕೊನೆಯ ತನಕ ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುವಂತೆ ಫುಟ್ ಬಾತ್ (ಕಾಲು ದಾರಿ) ಕಲ್ಪಿಸುವಂತೆ ಕಾಮಗಾರಿ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಪುರಸಭಾ ಮುಖ್ಯ ಅಧಿಕಾರಿ ಆನಂದ್, ಪಿಡಬ್ಲ್ಯೂ ಇಂಜಿನಿಯರ್ ರಾಘವೇಂದ್ರ, ಪುರಸಭಾ ಮಾಜಿ ಸದಸ್ಯರಾದ ರಾಘವೇಂದ್ರ ಖಾರ್ವಿ ಮದ್ದುಗುಡ್ಡೆ, ಅಬ್ಬು ಅಹಮದ್, ಸಂತೋಷ್ ಶೆಟ್ಟಿ, ಚಂದ್ರಶೇಖರ್ ಖಾರ್ವಿ ಹಾಗೂ ಪುರಸಭಾ ಅಧಿಕಾರಿ ವರ್ಗದವರು, ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




By
ForthFocus™