ಉಡುಪಿ, ಡಿ.28: ಭಾವೀ ಪರ್ಯಾಯ ಪೀಠಾಧೀಶರಾದ ಹಾಗೂ ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ತಮ್ಮ ಶಿಷ್ಯರು ಹಾಗೂ ಭಕ್ತರೊಂದಿಗೆ ಪಡೆದರು.

ಮೈಸೂರಿನ ಅರಮನೆಗೂ ಈ ಸಂದರ್ಭದಲ್ಲಿ ಶ್ರೀಪಾದರು ಭೇಟಿ ನೀಡಿದರು. ಅರಮನೆಯ ವತಿಯಿಂದ ಶ್ರೀಪಾದರನ್ನು ಗೌರವಿಸಲಾಯಿತು.





By
ForthFocus™