ಉಡುಪಿ, ಡಿ.26: ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ 7ನೇ ವರ್ಶದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಸ್ವರ್ಗ ಆಶ್ರಮದಲ್ಲಿ ನಡೆಯಿತು. ಈ ಸಂದಭ೯ದಲ್ಲಿ ಅಮ್ಮ ಡ್ರೀಮ್ಸ್ ತಂಡದ ವಿಶೇಷ ಸಂಗೀತ ಕಾರ್ಯಕ್ರಮ ಅದೇ ರೀತಿ 3 ಅಸಹಾಯಕ ಕುಟುಂಬಗಳಿಗೆ 2 ತಿಂಗಳ ತಲಾ 25 ಕೆಜಿ ಅಕ್ಕಿ, 3 ಅಸಾಯಕರಿಗೆ ತಲಾ 10 ಸಾವಿರ ರೂ.ಸಹಾಯಧನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೋಮ್ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಸ್ವರ್ಗ ಆಶ್ರಮ ಪ್ರಥಮ ವರ್ಷದ ಆಚರಣೆ ಮಾಡುತ್ತಿದೆ 40 ಜನ ಅಸಾಯಕರಿಗೆ ಆಶ್ರಯ ಈ ಸಂಸ್ಥೆಯು ನೀಡುತ್ತಿದೆ. ವಿವಿಧ ರೀತಿಯ ಕಾನ್ಸೆಪ್ಟ್ ಗಳ ಮೂಲಕ ಹಲವಾರು ವರ್ಷಗಳಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಹಕರಿಸುತ್ತಿರುವ ಎಲ್ಲ ದಾನಿಗಳಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಡಾ. ಸುಮಾ ಎಸ್ ಶೆಟ್ಟಿ, ರಾಘವೇಂದ್ರ ಪೂಜಾರಿ ಉದಯ ನಾಯ್ಕ್, ರಾಘವೇಂದ್ರ ಕರ್ವಾಲು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಹಬ್ಬದ ಊಟ ನಡೆಯಿತು.




By
ForthFocus™