ಇನ್ನಂಜೆ, ಡಿ.21: ರೋಟರಿ ಸಮುದಾಯ ದಳ ಇನ್ನಂಜೆ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಪಾಂಗಾಳ ತುಂಗೇರ್ ಬೈಲು ಇಲ್ಲಿ ನಿರ್ಮಿಸಿರುವ ‘ಕುಶಲ ನಿವಾಸ’ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು.
ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ವಜ್ರೇಶ್ ಅಚಾರ್ಯ, ರೋಟರಿ ಸಹಾಯಕ ಗವರ್ನರ್ ವಿಘ್ನೇಶ್ ಶಣೈ, ರೋಟರಿ ಜಿಲ್ಲಾ ಉಪಸಭಾಪತಿ ಗುರುಪ್ರಸಾದ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.




By
ForthFocus™