Saturday, January 17, 2026
Saturday, January 17, 2026

ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ: ‘ನಮ್ಮ ನಡೆ ವಾರ್ಡ್ ಕಡೆಗೆ’

ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ: ‘ನಮ್ಮ ನಡೆ ವಾರ್ಡ್ ಕಡೆಗೆ’

Date:

ಉಡುಪಿ, ಡಿ.15: ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಇನ್ನಷ್ಟು ಸಮರ್ಪಕವಾಗಿ ಅನುಷ್ಠಾನವಾಗಲು ಕಾರ್ಯಕ್ರಮಗಳು ರೂಪಿಸಿಕೊಂಡಿದ್ದು ‘ನಮ್ಮ ನಡೆ ಗ್ರಾಮ ಪಂಚಾಯತ್ ಕಡೆಗೆ’ ಕಾರ್ಯಕ್ರಮ ನಡೆಯಿತು. ಈಗ ಉಡುಪಿ ತಾಲೂಕಿನಡಿಯಲ್ಲಿ ಬರುವ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ‘ನಮ್ಮ ನಡೆ ವಾರ್ಡ್ ಕಡೆಗೆ’ ಕಾರ್ಯಕ್ರಮ 16.12.2025 ಹಾಗೂ ತಾ. 17.12.2025ರಂದು ನಡೆಯಲಿದೆ. 16.12.2025 ರಂದು ಬೆಳಿಗ್ಗೆ 10.00 ಗಂಟೆಗೆ ಸರಳೇಬೆಟ್ಟು, ಶೆಟ್ಟಿಬೆಟ್ಟು, ಪರ್ಕಳ, ಈಶ್ವರನಗರ, ಮಣಿಪಾಲ, ಸಗ್ರಿ, ಇಂದ್ರಾಳಿ, ಕುಂಜಿಬೆಟ್ಟು, ಇಂದಿರಾನಗರ ಮತ್ತು ಕಸ್ತೂರ್ಬಾನಗರ ವಾರ್ಡ್‌ಗಳ ಸಭೆಯು ಇಂದ್ರಾಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ಗುಂಡಿಬೈಲು, ಕಕ್ಕುಂಜೆ, ಕರಂಬಳ್ಳಿ, ಮೂಡುಪೆರಂಪಳ್ಳಿ, ನಿಟ್ಟೂರು, ಗೋಪಾಲಪುರ ಮತ್ತು ಕಡಿಯಾಳಿ ವಾರ್ಡ್‌ಗಳ ಸಭೆಯು ಗುಂಡಿಬೈಲು ಜನತಾ ವ್ಯಾಯಾಮ ಶಾಲೆಯಲ್ಲಿ ನಡೆಯಲಿದೆ.

17.12.2025ರಂದು ಬೆಳಿಗ್ಗೆ 10.00 ಗಂಟೆಗೆ ಬಡಗುಬೆಟ್ಟು, ಚಿಟ್ಪಾಡಿ, ಬನ್ನಂಜೆ, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಶಿರಿಬೀಡು ಹಾಗೂ ಅಂಬಲಪಾಡಿ ವಾರ್ಡ್‌ಗಳ‌ ಸಭೆಯು ಅಜ್ಜರಕಾಡು ಪುರಭವನದ ಊಟದ ಹಾಲ್‌ನಲ್ಲಿ ನಡೆಯಲಿದೆ. ಮಧ್ಯಾಹ್ನ 3.00 ಗಂಟೆಗೆ ಕೊಳ, ವಡಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು, ಕಲ್ಮಾಡಿ, ಮೂಡುಬೆಟ್ಟು, ಕೊಡಂಕೂರು ಮತ್ತು ಸುಬ್ರಹ್ಮಣ್ಯನಗರ ವಾರ್ಡ್‌ಗಳ ಸಭೆಯು ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!