ಪರ್ತಗಾಳಿ, ಡಿ.14: ಭಾವೀ ಪರ್ಯಾಯ ಪೀಠಾಧೀಶರಾದ ಹಾಗೂ ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವೀ ಸಂಚಾರದಲ್ಲಿರುವ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೇವೊತ್ತಮ ಮಠ ಪರ್ತಗಾಳಿ ಗೋವ ಇಲ್ಲಿಗೆ ಭೇಟಿ ನೀಡಿದರು.

ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಿದರು. ಪರ್ತಗಾಳಿ ಶ್ರೀಪಾದರು ತಮ್ಮ ಪಟ್ಟದ ದೇವರ ದರ್ಶನ ಮಾಡಿಸಿದರು.

ಉಭಯ ಶ್ರೀಪಾದರು ಪರಸ್ಪರ ಗೌರವ ಸಮರ್ಪಣೆ ಹಾಗೂ ಶೀರೂರು ಶ್ರೀಪಾದರಿಗೆ ಪರ್ತಗಾಳಿ ಮಠದ ವತಿಯಿಂದ ಮಾಲಿಕೆ ಮಂಗಳಾರತಿ ಹಾಗೂ ಶೀರೂರು ಶ್ರೀಪಾದರಿಂದ ರಾತ್ರಿ ಪೂಜೆ ನಡೆಯಿತು. ಸಭಾ ಕಾರ್ಯಕ್ರಮ ನಡೆದು ಉಭಯ ಶ್ರೀಪಾದರು ಆಶೀರ್ವಚನ ನೀಡಿದರು.




By
ForthFocus™