Thursday, April 23, 2026
Thursday, April 23, 2026

ನಿಟ್ಟೆ ಬಜಕಳದಲ್ಲಿ ಪರಿಸರ ಜಾಗೃತಿ, ಹಣ್ಣಿನ ಗಿಡ ವಿತರಣೆ

ನಿಟ್ಟೆ ಬಜಕಳದಲ್ಲಿ ಪರಿಸರ ಜಾಗೃತಿ, ಹಣ್ಣಿನ ಗಿಡ ವಿತರಣೆ

Date:

ನಿಟ್ಟೆ, ಡಿ.14: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಿದರೆ ಮುಂದಿನ ಭವಿಷ್ಯದ ಮಕ್ಕಳಿಗೆ ಆರೋಗ್ಯದ ಮೇಲೆ ಬೀರುವ ಪರಿಣಾಮಕಾರಿಯಾದಂತ ಮಾರಕ ರೋಗಗಳು ಬಾರದಿರಲು ಸಾಧ್ಯವಾಗುತ್ತದೆ ಎಂದು ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಸುರತ್ಕಲ್ ಹೇಳಿದರು. ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಸುರತ್ಕಲ್ ಇವರ ಮುಂದಾಳತ್ವದಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬೋಳ, ಛತ್ರಪತಿ ಫೌಂಡೇಶನ್, ಕಾರ್ಕಳ, ರೋಟರಿ ಸಮುದಾಯದಳ ಕೆಮ್ಮಣ್ಣು – ನಿಟ್ಟೆ, ಇವರ ಸಹಯೋಗದೊಂದಿಗೆ ಪರಿಸರ ಜಾಗೃತಿ, ಹಣ್ಣಿನ ಗಿಡ ವಿತರಣೆ, ಸನ್ಮಾನ ಕಾರ್ಯಕ್ರಮ ನಿಟ್ಟೆ ಲೆಮಿನಾಕ್ರಾಸ್ – ಬಜಕಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು. ಪ್ರತಿಯೊಬ್ಬರೂ ಒಂದು ಗಿಡವನ್ನು ತಮ್ಮ ಮನೆಯ ಎದುರುಗಡೆ ನೆಟ್ಟಾಗ ಪರಿಸರದ ಕಾಳಜಿ ಜಾಗೃತಿಯನ್ನು ವಹಿಸಲು ಸಾಧ್ಯ ಎಂದು ಮೂಡಬಿದಿರೆ ಅರಣ್ಯ ಇಲಾಖೆಯ ಎಸಿಎಫ್‌ಓ ಪಿ. ಶ್ರೀಧರ್ ಅವರು ಹೇಳಿದರು. ಕಾರ್ಕಳದಲ್ಲಿ ಬ್ರಿಗೇಡಿಯರ್ ಐ.ಎನ್.ರೈ (ನಿವೃತ್ತರು) ಮತ್ತು ಪ್ರಗತಿಪರ ಸಾವಯವ ತರಕಾರಿ ಕೃಷಿಕರು ಸಮಾಜಸೇವಕರಾದ ನಿಟ್ಟೆಗುತ್ತು ಜಯರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾರ್ಕಳ ಛತ್ರಪತಿ ಫೌಂಡೇಶನ್‌ನ ಅಧ್ಯಕ್ಷರಾದ ಗಿರೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೋಳ ಸದಾಶಿವ ಶೆಟ್ಟಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಸುರೇಶ್ ಪೂಜಾರಿ ಅಬ್ಬನಡ್ಕ, ಬೋಳ ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ದಿನೇಶ್ ಆಚಾರ್, ನಿಟ್ಟೆ – ಕೆಮ್ಮಣ್ಣು ರೋಟರಿ ಸಮುದಾಯದಳದ ಅಧ್ಯಕ್ಷರಾದ ಗಣೇಶ್ ಭಟ್ ಕೆಮ್ಮಣ್ಣು, ಮಹಾಬಲ ರೈ ಅವರು ಉಪಸ್ಥಿತರಿದ್ದರು.

ಕೆಮ್ಮಣ್ಣು ವೆಂಕಟಕೃಷ್ಣ ಭಟ್ ಅವರು ಪರಿಚಯ ಮಾಡಿದರು, ಬೋಳ ಸುಧಾಕರ ಆಚಾರ್ಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ವೀಣಾ ರವಿ ಆಚಾರ್ಯ ಅವರು ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮನುಷ್ಯ ಮಾನವೀಯನಾಗುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಏ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು...

ಹ್ಯಾಕ್ ಫೆಸ್ಟ್ 2026

ಕಾರ್ಕಳ, ಏ.22: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಫೈನೈಟ್...

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಯಶಸ್ವಿನ ತಂತ್ರಗಳು

ಬಸ್ರೂರು, ಏ.22: ಶ್ರೀ ಶಾರದಾ ಕಾಲೇಜು ಬಸ್ರೂರು ಗ್ರಂಥಾಲಯ ಮತ್ತು ಮಾಹಿತಿ...

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವರ್ಷ- ಭಯೋತ್ಪಾದನಾ ಕೃತ್ಯ ಎಸಗಿದವರಿಗೆ ಭಾರತೀಯ ಸೇನೆಯ ಕಠಿಣ ಎಚ್ಚರಿಕೆ

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಈ ದಿನದಂದು,...
error: Content is protected !!