ಉಡುಪಿ, ಡಿ.14: ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲಿಕರು ಮತ್ತು ಅಧಿಭೋಗದಾರರು, ತಮ್ಮ ಮಾಲೀಕತ್ವದ ಕಟ್ಟಡ, ಅಪಾರ್ಟ್ಮೆಂಟ್, ವಾಣಿಜ್ಯ ಸಮುಚ್ಛಯ, ಖಾಲಿ ನಿವೇಶನ ಮತ್ತು ಕೈಗಾರಿಕಾ ಕಟ್ಟಡ, ಸಾರ್ವಜನಿಕ ಕಟ್ಟಡದ ಆಸ್ತಿ ತೆರಿಗೆ, ಘನತ್ಯಾಜ್ಯ ಶುಲ್ಕ, ನೀರಿನ ಕರ, ಉದ್ದಿಮೆ ಪರವಾನಿಗೆ ಮತ್ತು ಜಾಹೀರಾತು ಫಲಕದ ಹಿಂದಿನ ಬಾಕಿ ಮತ್ತು ಪ್ರಸಕ್ತ ಸಾಲಿನ ತೆರಿಗೆಯನ್ನು ಡಿಸೆಂಬರ್ 31 ರೊಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಸಬಂಧಪಟ್ಟವರ ಕಟ್ಟಡದ ನೀರಿನ ಸಂಪರ್ಕ ಮತ್ತು ಒಳಚರಂಡಿ ಜೋಡಣೆಯನ್ನು ಸ್ಥಗಿತಗೊಳಿಸಿ, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕಾರ ವಸೂಲಾತಿಗಾಗಿ ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ನಗರಸಭೆ: ವಿವಿಧ ತೆರಿಗೆ ಪಾವತಿಗೆ ಸೂಚನೆ
ನಗರಸಭೆ: ವಿವಿಧ ತೆರಿಗೆ ಪಾವತಿಗೆ ಸೂಚನೆ
Date:




By
ForthFocus™