ಉಡುಪಿ, ನ.30: ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಡುಪಿ ಶ್ರೀಕೃಷ್ಣಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರಪ್ರಥಮವಾಗಿ ಕನಕದಾಸರ ಗುಡಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿ, ನಂತರ ಸ್ವರ್ಣಮಯ ಕನಕನ ಕಿಂಡಿಯನ್ನು ಲೋಕಾರ್ಪಣೆಗೈದಿರುವುದು ಕನಕಭಕ್ತರೆಲ್ಲರಿಗೂ ಐತಿಹಾಸಿಕ ಹಾಗೂ ವಿಶೇಷ ದಿನವಾಗಿದೆ.
ಉಡುಪಿಯ ಶ್ರೀಕೃಷ್ಣನನ್ನು ಮಧ್ವಾಚಾರ್ಯರು ಪ್ರತಿಷ್ಠೆ ಮಾಡಿದಂತೆ, ಕನಕದಾಸರನ್ನು ಮಲ್ಪೆ ಮಧ್ವರಾಜರು ಪ್ರತಿಷ್ಠಾಪಿಸಿದರೆಂಬುದು ಇತಿಹಾಸ. 1965ರಲ್ಲಿ ನನ್ನ ತಂದೆಯವರಾದ ಮಲ್ಪೆ ಮಧ್ವರಾಜರು ನಿರ್ಮಿಸಿದ ಕನಕದಾಸರ ಗುಡಿಗೆ, 60 ವರ್ಷಗಳ ಬಳಿಕ ಇಂದು ಪ್ರಧಾನಮಂತ್ರಿಗಳು ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿರುವುದು ಕನಕದಾಸರ ಪವಾಡಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.




By
ForthFocus™