Wednesday, November 11, 2026
Wednesday, November 11, 2026

ಜೇಸಿಐ ಉಡುಪಿ ಸಿಟಿ ನೂತನ ಪದಾಧಿಕಾರಿಗಳ ಪದಪ್ರದಾನ

ಜೇಸಿಐ ಉಡುಪಿ ಸಿಟಿ ನೂತನ ಪದಾಧಿಕಾರಿಗಳ ಪದಪ್ರದಾನ

Date:

ಉಡುಪಿ, ನ.30: ವಲಯದ ಅತ್ಯಂತ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ಇದರ ನೂತನ ಅಧ್ಯಕ್ಷೆ ಮತ್ತು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಿತ್ಯಾನಂದ ಆರ್ಕೆಡ್ ನಲ್ಲಿ ನ.29 ರಂದು ನಡೆಯಿತು. ಘಟಕದ 24ನೆಯ ಅಧ್ಯಕ್ಷರಾಗಿ ರಂಗಕರ್ಮಿ ಬಾಸುಮ ಕೊಡಗು ದಂಪತಿಗಳ ಪುತ್ರಿ ಪಲ್ಲವಿ ಕೊಡಗು ಅಧಿಕಾರ ಸ್ವೀಕರಿಸಿದರು.

ಜೆಸಿ ವಲಯ 15ರ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯದರ್ಶಿಯಾಗಿ ಸಮಿಯಾ ಹೆಗ್ಡೆ, ಖಚಾಂಜಿಯಾಗಿ ಮಹಮ್ಮದ್ ಜಿಯಾದ್, ಮಹಿಳಾ ಜೆಸಿ ಸಂಚಾಲಕರಾಗಿ ನಯನ ಉದಯ್ ನಾಯ್ಕ್, ಯುವ ಜೇಸಿ ಅಧ್ಯಕ್ಷರಾಗಿ ಶ್ರೀರಾಜ್ ಆಚಾರ್ಯ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ 24ಹೊಸ ಜೆಸಿ ಸದಸ್ಯರನ್ನು ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಪ್ರಮಾಣವಚನ ಬೋಧಿಸಿ ಬರಮಾಡಿಕೊಂಡರು. ಜೆಸಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೈಕ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು ಈ ಸಂಸ್ಥೆಯ ಮೂಲಕ ಉತ್ತಮ ರೀತಿಯ ತರಬೇತಿಯನ್ನು ಪಡೆಯುವ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಅತಿಥಿಗಳಾಗಿ ಜೆ ಸಿ ಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರಾದ ಮಹಮದ್ ಸುಹಾನ್ ಹಾಗೂ ಲಯನ್ಸ್ ಸಂಸ್ಥೆಯ ಪೂರ್ವ ಜಿಲ್ಲಾ ಗವನ೯ರ್, ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ ಶುಭ ಹಾರೈಸಿದರು.

ಉಡುಪಿ ಸಿಟಿ ಘಟಕದ ವತಿಯಿಂದ ಪೂರ್ವ ಅಧ್ಯಕ್ಷ ದಿ.ಶಶಿಪ್ರಸಾದ್ ರಾವ್ ನೆನಪಿನಲ್ಲಿ ಕೊಡ ಮಾಡಲ್ಪಡುವ ಉಡುಪಿ ಕಣ್ಮಣಿ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗ ಪಟು ತನುಶ್ರೀ ಪಿತ್ರೋಡಿ ರವರಿಗೆ ನೀಡಲಾಯಿತು. ನೂತನ ಅಧ್ಯಕ್ಷರ ಆಶಯದಂತೆ ದಿ. ಸಾಲುಮರದ ತಿಮ್ಮಕ್ಕ ಇವರ ನೆನಪಿನಲ್ಲಿ ವರ್ಷಪೂರ್ತಿ ನಡೆಯುವ ಹಸಿರು ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ವಿನಯ ಆಚಾರ್ಯ ಇವರ ಜೆಸಿವಾಣಿಯೊಂದಿಗೆ ಆರಂಭವಾದ ಸಮಾರಂಭ ನೂತನ ಕಾರ್ಯದರ್ಶಿ ಸಮಿಯಾ ಹೆಗ್ಡೆ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

ಕ್ರೀಡಾ ಕ್ಷೇತ್ರದೊಂದಿಗೆ ಸಾಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ...

ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ: ಸಾಹಿತಿ ಇಂದಿರಾ ಹಾಲಂಬಿ

ಉಡುಪಿ, ನ.9: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ...

ಶ್ರೀಕೃಷ್ಣ ಮಠದಲ್ಲಿ ಗೋಪೂಜೆ ಸಂಭ್ರಮ; ರಥಬೀದಿಯಲ್ಲಿ ವೈಭವದ ಗೋ-ಮೆರವಣಿಗೆ

ಉಡುಪಿ, ನ.9: ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ವೈಭವದಿಂದ ನಡೆಯಿತು....

ದೀಪಾವಳಿ: ಬೆಳಕಿನ ಹಬ್ಬದ ಸಮಗ್ರ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ಆಚರಣೆಗಳು

ದೀಪಾವಳಿ ಅಥವಾ ದೀಪಾವಳೀ ಎಂದರೆ ಸಂಸ್ಕೃತದಲ್ಲಿ 'ದೀಪಗಳ ಆವಳಿ' (ಸಾಲು ಸಾಲು...
error: Content is protected !!