Saturday, January 17, 2026
Saturday, January 17, 2026

ಗಂಗೊಳ್ಳಿ: ‘ಮಾತೃ ದೇವೋಭವ’

ಗಂಗೊಳ್ಳಿ: ‘ಮಾತೃ ದೇವೋಭವ’

Date:

ಗಂಗೊಳ್ಳಿ, ನ.19: ದಿನವೂ ಹತ್ತಾರು ಮಕ್ಕಳನ್ನು ತಮ್ಮ ಸ್ವಂತ ಮನೆಯ ಮಕ್ಕಳಂತೆ ಕಾಳಜಿಯಿಂದ ಆರೈಕೆ ಮಾಡುವ, ಅಕ್ಷರದ ಅರಿವು ಮೂಡಿಸುವ, ಸಂಸ್ಕೃತಿಯನ್ನು ಕಲಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಮತ್ತು ಅಭಿನಂದನನೀಯವಾದದ್ದು ಎಂದು ಗಂಗೊಳ್ಳಿಯ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಮಡಿವಾಳ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗ (ರಿ.)ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಗಂಗೊಳ್ಳಿ ವಲಯದ 18 ಅಂಗನವಾಡಿ ಮತ್ತು ಶಿಶು ಮಂದಿರದ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಅಭಿನಂದಿಸುವ ಮಾತೃ ದೇವೋ ಭವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಗೊಳ್ಳಿಯ ಉದ್ಯಮಿ ವಿಠ್ಠಲ್ ಜಿ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಭವಾನಿ ಶಂಕರ್ ಖಾರ್ವಿ, ಮತ್ಸ್ಯೋದ್ಯಮಿ ರಾಘವೇಂದ್ರ ವಸಂತ ಮೇಸ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಶೇರುಗಾರ, ಗಂಗೊಳ್ಳಿಯ ಉದ್ಯಮಿ ಕಾರ್ತಿಕ್ ಯು ಶೇಟ್ ಮತ್ತು ಸಲೋನಿ ಕಾರ್ತಿಕ್ ಶೇಟ್ ಉಪಸ್ಥಿತರಿದ್ದರು.

ಗಂಗೊಳ್ಳಿ ವಲಯದ ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫರ್ನಾಂಡಿಸ್, ಕಮಲ, ಸಂಗೀತ ಬಿ, ರೇಖಾ, ನಿಖಿತಾ ಭಂಡಾರಿ, ಶೇಷಮ್ಮ ಶೇರುಗಾರ್, ಶೋಭಾ ಎಸ್ ಕೆ, ಸಹನಾ ಕೆ, ಅಂಗನವಾಡಿ ಸಹಾಯಕಿಯರಾದ ಸರೋಜ ಪೂಜಾರಿ, ಸೀಮಾ ಖಾರ್ವಿ, ಶಾಂತಿ ಖಾರ್ವಿ, ರೇಷ್ಮಾ ಖಾರ್ವಿ, ಗೌರಿ, ಸುಜಾತ, ಮುಕಾಂಬು, ಗೌರಿ ಖಾರ್ವಿ ಮತ್ತು ಗಂಗೊಳ್ಳಿಯ ನಿವೇದಿತಾ ಶಿಶು ಮಂದಿರದ ಪ್ರೇಮ ಮತ್ತು ನಾಗರತ್ನ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಅಧ್ಯಕ್ಷ ಗೋಪಾಲ ಪೂಜಾರಿ ಶುಭ ಹಾರೈಸಿದರು. ಇತ್ತೀಚಿಗೆ ನಿಧನರಾದ ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನಗಳನ್ನು ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ದಿಯಾ ಜಿ ಪೈ ಪ್ರಾರ್ಥಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಕಾರ್ತಿಕ್ ಬಿ ಖಾರ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಳಗದ ಉಪಾಧ್ಯಕ್ಷೆ ಮಮತಾ ವಂದಿಸಿದರು. ಸನ್ಮಾನಿತರ ಪರವಾಗಿ ಫಿಲೋಮಿನಾ ಫರ್ನಾಂಡಿಸ್ ಅವರು ಶ್ರೀ ನಾರಾಯಣ ಗುರು ಜನಸೇವಾ ಬಳಗಕ್ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಐದು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!