Saturday, May 2, 2026
Saturday, May 2, 2026

ಹೊಸ ಆ್ಯಪ್ ಗಳನ್ನು ನಿರ್ವಹಿಸುವಾಗ ಎಚ್ಚರ ವಹಿಸಿ: ಗಂಗೊಳ್ಳಿ ಪೋಲಿಸ್ ಠಾಣಾಧಿಕಾರಿ ಸುನಿಲ್

ಹೊಸ ಆ್ಯಪ್ ಗಳನ್ನು ನಿರ್ವಹಿಸುವಾಗ ಎಚ್ಚರ ವಹಿಸಿ: ಗಂಗೊಳ್ಳಿ ಪೋಲಿಸ್ ಠಾಣಾಧಿಕಾರಿ ಸುನಿಲ್

Date:

ಗಂಗೊಳ್ಳಿ, ಅ.30: ಯಾವುದೇ ಹೊಸ ಆ್ಯಪ್ ಗಳನ್ನು ನಿರ್ವಹಿಸುವಾಗ ಸಾರ್ವಜನಿಕರು ಮುಖ್ಯವಾಗಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಅವುಗಳ ಅಧಿಕೃತೆಯ ಬಗೆಗೆ ಜಾಗರೂಕರಾಗಿರಿ. ನಿಮ್ಮ ವಯಕ್ತಿಕ ವಿವರಗಳನ್ನು ದಾಖಲಿಸಿದಾಗ ಕೆಲವೊಮ್ಮೆ ಅವು ಸೈಬರ್ ವಂಚಕರ ವಶವಾಗಬಹುದು, ಅದರಿಂದ ನಿಮ್ಮ ಚಾರಿತ್ರ್ಯಕ್ಕೆ ಧಕ್ಕೆ ಬರಬಹುದು. ಓಟಿಪಿಯನ್ನು ಯಾವುದೆ ಕಾರಣಕ್ಕೆ ಕೊಟ್ಟು ಮೋಸಹೋಗದೆ ಮುನ್ನೆಚ್ಚರಿಕೆವಹಿಸಿ ಎಂದು ಗಂಗೊಳ್ಳಿ ಪೋಲಿಸ್ ಠಾಣೆಯ ಠಾಣಾಧಿಕಾರಿ ಸುನಿಲ್ ಹೇಳಿದರು.

ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಜಯೀಂದ್ರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಉಪನ್ಯಾಸಕರಾದ ಎನ್.ಸಿ. ವೆಂಕಟೇಶಮೂರ್ತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸುದೇಶ್, ಶಶಾಂಕ್ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕ ನಾರಾಯಣ್ ಇ. ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಕ್ಷಾ ವಂದಿಸಿದರು. ದೀಪಾಲಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೋಣಿ ದುರಂತ: ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆ

ಜಬಲ್ಪುರ, ಮೇ 1: ಮಧ್ಯಪ್ರದೇಶದಲ್ಲಿ, ಜಬಲ್ಪುರದಲ್ಲಿ ನಡೆದ ಕ್ರೂಸ್ ದೋಣಿ ದುರಂತದಲ್ಲಿ...

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

ನವದೆಹಲಿ, ಮೇ.1: ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಚುನಾವಣಾ...

ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ

ನವದೆಹಲಿ, ಮೇ 1: ಮೇ 1 ರಿಂದ ಜಾರಿಗೆ ಬರುವಂತೆ 19...

ಕಾರ್ಮಿಕರು ದೇಶದ ಅಭಿವೃದ್ಧಿಯ ಶಿಲ್ಪಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ.1: ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಶಿಲ್ಪಿಗಳು...
error: Content is protected !!