Saturday, January 17, 2026
Saturday, January 17, 2026

ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸ್ವಸ್ಥ್ -2025 ವಾರ್ಷಿಕ ಸಮ್ಮೇಳನ

ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸ್ವಸ್ಥ್ -2025 ವಾರ್ಷಿಕ ಸಮ್ಮೇಳನ

Date:

ಮಣಿಪಾಲ, ಅ.17: ವಿದ್ಯಾರ್ಥಿಗಳ ನೇತೃತ್ವದ 3ನೇ ವಾರ್ಷಿಕ ಸಮ್ಮೇಳನ ಸ್ವಸ್ಥ್ 2025: ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರ ಕಾರ್ಯಸಾಧ್ಯ ಪರ್ಯಾಯ ಪರಿಹಾರಗಳು ಎಂಬ ವಿಷಯದ ಕುರಿತು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಆರೋಗ್ಯ ರಕ್ಷಣೆ ಮತ್ತು ಆಸ್ಪತ್ರೆ ನಿರ್ವಹಣಾ ವಿಭಾಗ, ಮಾಹೆ ಮಣಿಪಾಲವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಬೆಂಬಲದೊಂದಿಗೆ ಆಯೋಜಿಸಿತ್ತು. ಡಿಜಿಟಲ್ ಆರೋಗ್ಯ ರಕ್ಷಣೆಯಲ್ಲಿ ಪರಿವರ್ತನಾ ವಿಚಾರಗಳನ್ನು ಚರ್ಚಿಸಲು 185 ವಿದ್ಯಾರ್ಥಿಗಳು, ಆರೋಗ್ಯ ವೃತ್ತಿಪರರು, ಶಿಕ್ಷಣ ತಜ್ಞರು, ಮಹತ್ವಾಕಾಂಕ್ಷಿ ಯುವ ಆಸ್ಪತ್ರೆ ವ್ಯವಸ್ಥಾಪಕರನ್ನು ಸಮ್ಮೇಳನವು ಒಟ್ಟುಗೂಡಿಸಿತು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಆಸ್ಪತ್ರೆ, ಬೆಳಗಾವಿಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಅವರು, ನೈಜ-ಪ್ರಪಂಚದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಹೇಳಿದರು. “ಬಿಲ್ಡಿಂಗ್ ರೆಸಿಲೆಂಟ್ ಟೀಚಿಂಗ್ ಹಾಸ್ಪಿಟಲ್ಸ್ : ಸಸ್ಟೈನಬಲ್ ಮಾಡೆಲ್ಸ್ ಫಾರ್ ದಿ ಫ್ಯೂಚರ್” ಎಂಬ ವಿಷಯದ ಕುರಿತಾದ ಪ್ಯಾನಲ್ ಚರ್ಚೆಯಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಸೈನ್ಸಸ್, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಮತ್ತು ಆಳ್ವಾಸ್ ಹೆಲ್ತ್ ಸೆಂಟರ್, ಮೂಡುಬಿದ್ರಿಯ ತಜ್ಞರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯು ಆಸ್ಪತ್ರೆಗಳಲ್ಲಿನ ಸುಸ್ಥಿರತೆಯಿಂದ ಹಿಡಿದು ಟೆಲಿಮೆಡಿಸಿನ್ ಮತ್ತು ಔಷಧಶಾಸ್ತ್ರದವರೆಗೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿತ್ತು. ಸಮ್ಮೇಳನದ ಸಮಯದಲ್ಲಿ ವಿಭಾಗದ ನಿಯೋಜನೆ ಕರಪತ್ರವನ್ನು ಸಹ ಬಿಡುಗಡೆ ಮಾಡಲಾಯಿತು.

ಸಮ್ಮೇಳನ ಪೂರ್ವ ಕಾರ್ಯಾಗಾರವು ಸುಸ್ಥಿರ ಆರೋಗ್ಯ ರಕ್ಷಣಾ ಉದ್ಯಮಗಳಿಗೆ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು, ಆರೋಗ್ಯ ಕ್ಷೇತ್ರದಲ್ಲಿಕೃತಕ ಬುದ್ದಿಮತ್ತೆ , ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ, ಆಸ್ಪತ್ರೆ ಯೋಜನೆ ಮತ್ತು ವಿನ್ಯಾಸ, ಆರೋಗ್ಯ ಕ್ಷೇತ್ರದಲ್ಲಿ ನಾಯಕತ್ವ ಹೀಗೆ 5 ಕಾರ್ಯಾಗಾರಗಳನ್ನು ಒಳಗೊಂಡಿತ್ತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!