ಬೆಳ್ಳೆ, ಅ.5: ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯತ್ ಪಾಂಬೂರು ಕೊರಗ ಸಮುದಾಯದವರಿಗೆ ಮಲ್ಟಿ ಪರ್ಪಸ್ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುದಾನದಿಂದ 60 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು. ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ, ಸುಧಾಕರ್ ಪೂಜಾರಿ, ರಾಜೇಂದ್ರ ಶೆಟ್ಟಿ, ಗುರುರಾಜ್ ಭಟ್, ಹೇಮಾ ವೆಂಕಟೇಶ್, ಅಮಿತಾ, ಗುರಿಕಾರರಾದ ವಸಂತ, ಸ್ಥಳೀಯರಾದ ರಮೇಶ, ಸುಂದರ, ಜಯ, ಅಪ್ಪಿ, ಕಮಲ, ವಿಶ್ವನಾಥ ಶೆಟ್ಟಿ, ರಘುನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಪಾಂಬೂರು: ಮಲ್ಟಿಪರ್ಪಸ್ ಸೆಂಟರ್ ಗುದ್ದಲಿ ಪೂಜೆ
ಪಾಂಬೂರು: ಮಲ್ಟಿಪರ್ಪಸ್ ಸೆಂಟರ್ ಗುದ್ದಲಿ ಪೂಜೆ
Date:




By
ForthFocus™