ಉಡುಪಿ, ಸೆ.13: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಟ್ಲಪಿಂಡಿ ದಿನ ಭಕ್ತರಿಗೆ ಹಂಚಲು ಒಂದೂವರೆ ಲಕ್ಷ ಚಕ್ಕುಲಿ ಮುರೂವರೆ ಲಕ್ಷ ಉಂಡೆ ತಯಾರಿ ಭರದಿಂದ ಸಾಗಿದೆ. ರಥಬೀದಿಯಲ್ಲಿ ಕೃಷ್ಣಲೀಲೆಯ ವಾತಾವರಣ ಮೇಳೈಸಿದೆ.

ಶ್ರೀಶ್ರೀಸುಗುಣೇಂದ್ರತೀರ್ಥರು ಕಂಡಂತೆ ಕೃಷ್ಣ ಕೃತಿ ಬಿಡುಗಡೆ: ಶ್ರೀಸುಗುಣೇಂದ್ರತೀರ್ಥಶ್ರೀಪಾದರು ಶ್ರೀಕೃಷ್ಣನ ಕುರಿತಾಗಿ ಬರೆದಿರುವ ಲೇಖನಗಳನ್ನು ಒಳಗೊಂಡಿರುವ ನೂತನ ಕೃತಿ ‘ಶ್ರೀಶ್ರೀಸುಗುಣೇಂದ್ರತೀರ್ಥರು ಕಂಡಂತೆ ಕೃಷ್ಣ’ ವನ್ನು ಸಂಜೆಯ ಹೊತ್ತಿನಲ್ಲಿ ರಾಜಾಂಗಣದಲ್ಲಿ ಪರ್ಯಾಯಪೀಠಸ್ಥ ಯತಿದ್ವಯರು ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಲಿರುವರು.

ಕೃತಿಯು ಕೃಷ್ಣ ಮಠದ ಬುಕ್ ಸ್ಟಾಲ್ನಲ್ಲಿ 100 ರೂಪಾಯಿ ಗೆ ಲಭ್ಯವಿರಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಪೌರಾಣಿಕ ನೃತ್ಯ ಸ್ಪರ್ಧೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಪೌರಾಣಿಕ ನೃತ್ಯ ಸ್ಪರ್ಧೆಯು ಸೋಮವಾರ ಬೆಳಗ್ಗೆ 9.30ಕ್ಕೆನಡೆಯಲಿದೆ. ಸ್ಪರ್ಧಿಗಳು ಶ್ರೀ ಕೃಷ್ಣ ಮಠದ ಕಚೇರಿಯಲ್ಲಿ ಅಥವಾ ರಾಮಚಂದ್ರ ಉಪಾಧ್ಯಾಯ 9448857522 ಅಥವಾ ಸುಮಿತ್ರ ಕೆರೆ ಮಠ 9035679905 ಇವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದೆ. 16 ವರ್ಷದ ಒಳಗೆ ಹಾಗೂ 16 ವರ್ಷದ ಮೇಲೆ. ವಿಜೇತರಿಗೆ ಸೂಕ್ತ ನಗದು ಬಹುಮಾನವನ್ನು ನೀಡಲಾಗುವುದು.

ಶ್ರೀ ಕೃಷ್ಣ ಪಾಂಚಜನ್ಯ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣ ಜನ್ಮಾಷ್ಠಮಿ ಸಾಂಸ್ಕೃತಿಕ ಮಂಡಲೋತ್ಸವದ ಪ್ರಯುಕ್ತ ನಿಟ್ಟೆ ವಿದ್ಯಾ ಸಂಸ್ಥೆ ಇವರಿಂದ ಶ್ರೀ ಕೃಷ್ಣ ಪಾಂಚಜನ್ಯ ಯಕ್ಷಗಾನ ನೆರವೇರಿತು.




By
ForthFocus™