ಶಿರ್ವ, ಸೆ.11: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ) ಉಡುಪಿ ಜಿಲ್ಲೆ ಮತ್ತು ಹಿಂದು ಪದವಿಪೂರ್ವಕಾಲೇಜು ಶಿವ೯ ಹಾಗೂ ಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಸಂಯುಕ್ತವಾಗಿ ಹಮ್ಮಿಕೊಂಡ ಪದವಿಪೂರ್ವ ವಿಭಾಗದ ಬಾಲಕ ಬಾಲಕಿಯರಿಗಾಗಿ ನಡೆದ ವಾಲಿಬಾಲ್ ಪಂದ್ಯಾವಳಿ ಶಿರ್ವ ಹಿಂದು ಪ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ತರವಾದ ಸ್ಥಾನವಿದೆ ಎಂದರು.
ಸಭಾಧ್ಯಕ್ಷತೆಯನ್ನು ಶಿರ್ವ ಪದವಿಪೂವ೯ ಕಾಲೇಜಿನ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ವಹಿಸಿದ್ದರು. ಅತಿಥಿಗಳಾಗಿ ಪ್ರೊ.ವೈ.ಭಾಸ್ಕರ ಶೆಟ್ಟಿ ಆಡಳಿತಾಧಿಕಾರಿ ಶಿವ೯ ಹಿಂದು ವಿದ್ಯಾವಧ೯ಕ ಸಂಘ ಸತೀಶ್ ಹೆಗ್ಡೆ;ಅಧ್ಯಕ್ಷ ಉಡುಪಿ ಜಿಲ್ಲಾ ಪ.ಪೂ.ದೈಹಿಕ ಶಿಕ್ಷಕ ಉಪನ್ಯಾಸಕರ ಸಂಘ ಸವಿತಾ ಪೂಜಾರಿ ಅಧ್ಯಕ್ಷರು ಶಿರ್ವ ಗ್ರಾ.ಪಂ ನವೀನ್ ಶೆಟ್ಟಿ ಕುತ್ಯಾರು ಅಧ್ಯಕ್ಷ ಹಳೆ ವಿದ್ಯಾರ್ಥಿ ಸಂಘ ಸುಪ್ರೀತ ಅವಿನಾಶ್ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾ ಪಟು ರತನ್ ಶೆಟ್ಟಿ ಸದಸ್ಯರ ಗ್ರಾ.ಪಂ. ಶಿರ್ವ; ಜೇೂಸೆಫ್ ಡಿ ಸೇೂಜ ಕಾಪು ತಾಲ್ಲೂಕು ಕ್ರೀಡಾ ಮೇಲ್ವಿಚಾರಕ ಜಯಪ್ರಕಾಶ್ ಶೆಟ್ಟಿ ಕಾರ್ಯದರ್ಶಿ ಜ್ಞಾನ ಎಜುಕೇಶನ್ ಟ್ರಸ್ಟ್ ಗುರುಪ್ರಸಾದ್ ಅಕಾಡೆಮಿಕ್ ಮುಖ್ಯಸ್ಥ:ಕಾಲೇಜು ಪ್ರಾಂಶುಪಾಲ ಸುಂದರ ಮೇರ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ದೇವೇಂದ್ರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ ವಿಜೇತರಿಗೆ ಬಹುಮಾನ ವಿತರಿಸಿದರು. ವಾಲಿಬಾಲ್ ಪಂದ್ಯಾವಳಿ ವಿಜೇತರ ವಿವರ: ಬಾಲಕರ ವಿಭಾಗ: ಪ್ರಥಮ ಸ್ಥಾನ ಹಿಂದು ಪದವಿಪೂರ್ವ ಕಾಲೇಜು ಶಿರ್ವ, .ದ್ವಿತೀಯ ಸ್ಥಾನ ಪೂರ್ಣಪ್ರಜ್ಞಾ ಪ.ಪೂ.ಕಾಲೇಜು ಅದಮಾರು. ಬಾಲಕಿಯರ ವಿಭಾಗ ಪ್ರಥಮ ಸ್ಥಾನ ಸೈಂಟ್ ಜಾನ್ಸ್ ಪ.ಪೂ.ಕಾಲೇಜು ಶಂಕರಪುರ. ದ್ವಿತೀಯ ಸ್ಥಾನ ತ್ರಿಶಾ ಪ.ಪೂ.ಕಾಲೇಜು ಕಟಪಾಡಿ. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ನಿಶಿತಾ ಕಾರ್ಯಕ್ರಮ ನಿರೂಪಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಶರಣ್ಯ ರಾವ್ ವಂದಿಸಿದರು.




By
ForthFocus™