ಬ್ರಹ್ಮಾವರ, ಜು.26: ಜಿಲ್ಲಾ ಪಂಚಾಯತ್ ಉಡುಪಿ ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ವಿಜ್ಜಾನ ಕೇಂದ್ರ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ 6 ದಿನದ ನೈಸರ್ಗಿಕ ಕೃಷಿ ತರಬೇತಿಯ ಸಮಾರೋಪ ಸಮಾರಂಭ ಕೃಷಿ ವಿಜ್ಜಾನ ಕೇಂದ್ರ ಬ್ರಹ್ಮವಾರ ಇಲ್ಲಿ ನೆಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಇವರು ಕೃಷಿ ಸಖಿಯರಿಗೆ ಪ್ರಮಾಣ ಪತ್ರ ವಿತರಿಸಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸೇವೆಗಳನ್ನು ನೀಡಲು ಕೃಷಿ ಸಖಿಯರನ್ನು ಪ್ರತಿ ಗ್ರಾಮ ಪಂಚಾಯತ್ ನಲ್ಲಿ ನಿಯೋಜನೆ ಮಾಡಲಾಗಿದೆ. ಕೃಷಿ ವಿಜ್ಞಾನ ಕೇಂದ್ರದ ಅನುಭವಿ ಹಾಗೂ ಹಿರಿಯ ಕೃಷಿ ವಿಜ್ಞಾನಿಗಳಿಂದ ನೈಸರ್ಗಿಕ ಕೃಷಿ ಬಗ್ಗೆ ತರಬೇತಿ ನೀಡಲಾಗಿದೆ ಈ ತರಬೇತಿ ಪಡೆದ ಕೃಷಿ ಸಖಿಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಸಮುದಾಯದ ಸಂಪನ್ಮೂಲ ವ್ಯಕ್ತಿಗಳಂತೆ ಕರ್ತವ್ಯ ನಿರ್ವಹಿಸಬೇಕು. ಕೃಷಿಗೆ ಸಂಬಂಧಪಟ್ಟ ಯೋಜನೆ, ಕಾರ್ಯಕ್ರಮ,ತರಬೇತಿ, ಸೌಲಭ್ಯಗಳನ್ನು ಆದ್ಯತೆಯಲ್ಲಿ ರೈತರಿಗೆ ತಲುಪಿಸಲು ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ರೈತರ ಸಬಲೀಕರಣದಲ್ಲಿ ಕೃಷಿ ಸಖಿಯರ ಪಾತ್ರ ಅಮೂಲ್ಯವಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ ಸುಧೀರ್ ಕಾಮತ್ ಕೆ. ವಿ ಪ್ರಾಂಶುಪಾಲರು, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ ಇವರು ಮಾತನಾಡಿ ಕೃಷಿ ಸಖಿಯರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಸಮಗ್ರ ಕೃಷಿ ಬಗ್ಗೆ ವಿವಿಧ ಹಂತದ ತರಬೇತಿ ನೀಡಲಾಗಿದೆ.ನಾಲ್ಕು ಗೋಡೆ ಮದ್ಯ ಪಡೆದ ತರಬೇತಿಯನ್ನು ಗ್ರಾಮೀಣ ಪ್ರದೇಶದ ಬಡ ರೈತರ ಸಬಲೀಕರಕ್ಕೆ ಆಸಕ್ತಿ ಇಂದ ಶ್ರಮಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನವೀನ್ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮವಾರ ಇವರು ವಹಿಸಿದರು. ಕಾರ್ಯಕ್ರಮದಲ್ಲಿ ವೀಣಾ ಶ್ಯಾನುಭಾಗ್ ಗೃಹ ವಿಜ್ಞಾನ ಪದವೀಧರೆ ಪೆತ್ರಿ, ಡಾ. ಸದಾನಂದ್ ಆಚಾರ್ಯ ವಿಜ್ಞಾನಿಗಳು, ರಂಜಿತಾ ಯುವ ವೃತ್ತಿಪರರು ಸಂಜೀವಿನಿ ಯೋಜನೆ ಉಪಸ್ಥಿತರಿದ್ದರು. ಸುಜಾತಾ ಕೃಷಿ ಸಖಿ ಕರ್ಕಂಜೆ, ಅರ್ಚನಾ ಪ್ರಭು ಕೃಷಿ ಸಖಿ ಗೋಪಾಡಿ, ಪ್ರತಿಮಾ ಕೃಷಿ ಸಖಿ ಶಂಕರನಾರಾಯಣ ತರಬೇತಿ ಅನುಭವ ಹಂಚಿಕೊಂಡರು.




By
ForthFocus™