ಸಾಲಿಗ್ರಾಮ, ಜು.16: ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಮಸ್ತೆ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಇದೇ ವೇಳೆ ಪಟ್ಟಣ ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ನಮಸ್ತೆ ಯೋಜನೆಯ ಗುರಿ, ಉದ್ದೇಶ, ನಗರ ಸ್ಥಳೀಯ ಸಂಸ್ಥೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಕಾರ್ಮಿಕರಿಗೆ ಮತ್ತು ನಾಗರಿಕರಿಗೆ ಪ್ರೊಜೆಕ್ಟರ್ ಮುಖಾಂತರ ಅರಿವು ಮೂಡಿಸುವ ಮಾಹಿತಿಯನ್ನು ನೀಡಿದರು. ನಮಸ್ತೆ ಯೋಜನೆಯಡಿ ಈಗಾಗಲೇ ಅನುಮೋದನೆಯಾಗಿರುವ ಆಯುಷ್ಮಾನ್ ಭಾರತ್ ಕಾರ್ಡ್ ಫಲಾನುಭವಿಗಳಿಗೆ ಸ್ವಚ್ಛತಾ ಕೆಲಸದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸ್ವಚ್ಚತಾ ಸಿಬ್ಬಂದಿಯವರಿಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಪಟ್ಟಣ ಪಂಚಾಯತ್ ವತಿಯಿಂದ ನೀಡಲಾಯಿತು. ಪಟ್ಟಣ ಪಂಚಾಯತ್‌ನ ಉಪಾಧ್ಯಕ್ಷರಾದ ಗಿರಿಜಾ ಪೂಜಾರಿ ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಸೂಯ ಹೇರ್ಳೆ, ಸದಸ್ಯರಾದ ಸಂಜೀವ ದೇವಾಡಿಗ, ಸುಲತಾ ಹೆಗ್ಡೆ ಇದ್ದರು. ಬಿಲ್ ಕಲೆಕ್ಟರ್ ಚಂದ್ರಶೇಖರ ಸೋಮಾಯಾಜಿ ಸ್ವಾಗತಿಸಿ ವಂದಿಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್: ನಮಸ್ತೆ ದಿನಾಚರಣೆ ಕಾರ್ಯಕ್ರಮ
ಸಾಲಿಗ್ರಾಮ ಪಟ್ಟಣ ಪಂಚಾಯತ್: ನಮಸ್ತೆ ದಿನಾಚರಣೆ ಕಾರ್ಯಕ್ರಮ
Date:




By
ForthFocus™