Saturday, January 17, 2026
Saturday, January 17, 2026

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ

Date:

ಉಡುಪಿ, ಏ.28: ಕುದುರೆಮುಖ ವನ್ಯಜೀವಿ ವಿಭಾಗದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿಯ ಬಳಕೆಯನ್ನು ಮೇ 01 ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ಉಪಯೋಗಕ್ಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ಇರುವ ಮುಳ್ಳೂರು ತನಿಖಾ ಠಾಣೆ, ಬಸ್ರಿಕಲ್ಲು ತನಿಖಾ ಠಾಣೆ ಹಾಗೂ ತನಿಕೋಡು ತನಿಖಾ ಠಾಣೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಪ್ರವಾಸಿಗರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಲಭ್ಯ ನೀರನ್ನು ಅಲ್ಲಿಯೇ ಕುಡಿಯಬಹುದಾಗಿದೆ. ಪ್ರವಾಸಿಗರು ಯಾವುದೇ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದ್ದು, ವಾಹನದಲ್ಲಿ ಇರುವ ಯಾವುದೇ ಪ್ಲಾಸ್ಟಿಕ್ ಬಾಟಲಿಗಳನ್ನು ತನಿಖಾ ಠಾಣೆಯಲ್ಲಿ ನಿರ್ಮಿಸಲಾಗಿರುವ ಪ್ಯಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಹಾಕಿ ಪ್ರಯಾಣವನ್ನು ಮುಂದುವರೆಸಬಹುದಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!