Friday, November 20, 2026
Friday, November 20, 2026

ಕರುಣೆ ಮತ್ತು ವೈಚಾರಿಕ ಕಣ್ಣುಗಳೇ ಗಾಂಧಿ ಮತ್ತು ಅಂಬೇಡ್ಕರ್‌

ಕರುಣೆ ಮತ್ತು ವೈಚಾರಿಕ ಕಣ್ಣುಗಳೇ ಗಾಂಧಿ ಮತ್ತು ಅಂಬೇಡ್ಕರ್‌

Date:

ಹಿರಿಯಡಕ, ಏ.19: ಸಾಮರಸ್ಯ, ಮತ್ತು ಸಮಾನತೆಯನ್ನೇ ತಿರುಳಾಗಿ ಹೊಂದಿರುವ ಭಾರತದ ಸಂವಿಧಾನ ಮತ್ತು ಬಹುಜನರ ಬದುಕು ಕೆಡದಂತೆ ಉಳಿಯಬೇಕಾದರೆ ನಮ್ಮೊಳಗಿನ ಗಾಂಧಿ ಮತ್ತು ಅಂಬೇಡ್ಕರ್‌ ಎಂಬ ಕರುಣೆ ಮತ್ತು ವೈಚಾರಿಕ ಎಚ್ಚರಗಳ ಕಣ್ಣುಗಳನ್ನು ಮಸುಕಾಗದಂತೆ ಸಂರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಎಚ್ಚರದ ಬದುಕೇ ನಿಜವಾದ ಸಂವಿಧಾನದ ಕಾವಲಾದ ಹಿನ್ನೆಲೆಯಲ್ಲಿ“ಗಾಂಧಿ ಭಾರತ ಮತ್ತು ಅಂಬೇಡ್ಕರ್‌ ಭಾರತ”ದಂತಹ ಕಾರ್ಯಕ್ರಮಗಳು ಮನೆ ಮನೆಗೆ ತಲುಪುವ ಅಗತ್ಯವಿದೆ ಎಂದು ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ʼಗಾಂಧಿ ಭಾರತʼ ಕಾರ್ಯಕ್ರಮದ ಅಂಗವಾಗಿ ನಡೆದ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ., ಡಾ. ಲಿತಿನ್‌ ಬಿ ಎಂ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಪರ್ಣ ಕೆ ಯು ಸಂಯೋಜಿಸಿ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶತಮಾನದ ಸಂಭ್ರಮಕ್ಕೆ ಸಜ್ಜಾದ ಪುತ್ತೂರು ಎಲ್.ವಿ.ಪಿ. ಶಾಲೆ; ನ. 20 ಮತ್ತು 21ರಂದು ಶತಮಾನೋತ್ಸವ ಆಚರಣೆ

ಉಡುಪಿ, ನ.19: ಉಡುಪಿಯ ಪುತ್ತೂರಿನ ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು...

ಪೇಶ್ ಇಮಾಮ್ ಹಾಗೂ ಮುಅಝಿನ್‌ರವರ ಬಾಕಿ ಗೌರವಧನ ಕೂಡಲೇ ಬಿಡುಗಡೆಗೊಳಿಸಿ: ಅಸ್ಗರ್ ಮುಡಿಪು ಆಗ್ರಹ

ಮಂಗಳೂರು, ನ.19: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮುಸ್ಲಿಂ...

ಕಾವೇರಿ 2.0: ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ

ಬೆಂಗಳೂರು, ನ.19: ಆಸ್ತಿ ನೋಂದಣಿಗಾಗಿ ಕಚೇರಿಗಳಿಗೆ ತೆರಳಿ ಭೌತಿಕ ದಾಖಲೆಗಳನ್ನು ಸಲ್ಲಿಸುವ...
error: Content is protected !!