Friday, February 27, 2026
Friday, February 27, 2026

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ ಯೋಜನೆಗೆ ಅರ್ಜಿ ಆಹ್ವಾನ

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ ಯೋಜನೆಗೆ ಅರ್ಜಿ ಆಹ್ವಾನ

Date:

ಉಡುಪಿ, ಏ.12: ದ್ವಿತೀಯ ಪಿಯುಸಿ ಹಾಗೂ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಫಲಿತಾಂಶಗಳ ಮೂಲಕ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಮಾಜದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೂ ಉನ್ನತ ವ್ಯವಸ್ಥೆಯಡಿಯಲ್ಲಿ ಹೈಟೆಕ್ ಸೌಲಭ್ಯದೊಂದಿಗೆ ಪಿ.ಯು. ಶಿಕ್ಷಣ ಹಾಗೂ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ದೊರಕಿಸಿಕೊಡಬೇಕೆಂಬ ಮಹಾದಾಸೆಯಿಂದ ‘ಕ್ರಿಯೇಟಿವ್ ಹೊಂಗಿರಣ’ ಯೋಜನೆಯನ್ನು ರೂಪಿಸುತ್ತಿದೆ.  ಈ ಯೋಜನೆಯಡಿಯಲ್ಲಿ 100 ಅರ್ಹ ವಿದ್ಯಾರ್ಥಿಗಳು ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಅಥವಾ ಪ್ರೋತ್ಸಾಹಧನದೊಂದಿಗೆ ಪಿ.ಯು ಶಿಕ್ಷಣ ಪಡೆಯುವ ಅವಕಾಶವಿರುತ್ತದೆ.
ಈ ಯೋಜನೆಗೆ ವಿಜ್ಞಾನ ವಿಭಾಗ ಸೇರಲಿಚ್ಛಿಸುವ ಯಾವುದೇ ವಿದ್ಯಾರ್ಥಿ http://www.creativeedu.in ಮುಖಾಂತರ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ಸಾಧಿಸುವ ಛಲಕ್ಕೆ ಬೆನ್ನೆಲುಬಾಗಿ ನಿಂತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಾಧನೆ ಮಾಡುವ ಹಂಬಲ ಇರುವ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದೆ. ಪೋಷಕರ ಹಾಗೂ ಪಾಲಕರ ಭರವಸೆಯನ್ನು ಈಡೇರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ವಿದ್ಯಾ ಸಂಸ್ಥೆಯಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606474298

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಿರಿಯಡಕ: ಉದ್ಯೋಗ ಮೇಳ

ಹಿರಿಯಡಕ, ಫೆ.27: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಮಾಹಿತಿ...

ಹಲವಾರು ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಒಪ್ಪಂದ

ನವದೆಹಲಿ, ಫೆ.27: ಭಾರತ ಮತ್ತು ಇಸ್ರೇಲ್ ಸಾಂಸ್ಕೃತಿಕ ವಿನಿಮಯ, ಭೂಭೌತಿಕ ಪರಿಶೋಧನೆ,...

90,000 ಕೋಟಿ ರೂಪಾಯಿಗಳ ಒಪ್ಪಂದಗಳಿಗೆ ಜಪಾನ್ ಕಂಪನಿಗಳೊಂದಿಗೆ ಉತ್ತರ ಪ್ರದೇಶ ಸರ್ಕಾರ ಸಹಿ

ಯು.ಬಿ.ಎನ್.ಡಿ., ಫೆ.27: ಉತ್ತರ ಪ್ರದೇಶ ಸರ್ಕಾರವು ಜಪಾನಿನ ವಿವಿಧ ಕಂಪನಿಗಳೊಂದಿಗೆ 90...

ಎನ್.ಸಿ.ಪಿ. ರಾಷ್ಟ್ರೀಯ ಅಧ್ಯಕ್ಷರಾಗಿ ಸುನೇತ್ರಾ ಪವಾರ್ ಆಯ್ಕೆ

ಮುಂಬಯಿ, ಫೆ.27: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ.) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ...
error: Content is protected !!