Saturday, May 9, 2026
Saturday, May 9, 2026

ಕವಿತೆಯ ಮಾತು- ಅಡಿಗರ ನೆನಪು ಕಾರ್ಯಾಗಾರ

ಕವಿತೆಯ ಮಾತು- ಅಡಿಗರ ನೆನಪು ಕಾರ್ಯಾಗಾರ

Date:

ಉಡುಪಿ, ಮಾ.7: ಯಕ್ಷ ರಂಗಾಯಣ ಕಾರ್ಕಳ ಇವರ ವತಿಯಿಂದ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ನ ಆವರಣದಲ್ಲಿ ಕವಿತೆಯ ಮಾತು – ಅಡಿಗರ ನೆನಪು ಒಂದು ದಿನದ ಕಾರ್ಯಾಗಾರವು ನಡೆಯಿತು. ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಉಪಾಧ್ಯ ಬಿ ಉಪನ್ಯಾಸ ನೀಡಿ ಮಾತನಾಡಿ, ಗೋಪಾಲ ಕೃಷ್ಣ ಅಡಿಗರು ನಾಡು ಕಂಡ ಶ್ರೇಷ್ಠ ಕವಿ. ಸಾರ್ವಕಾಲಿಕ ಮೌಲ್ಯಗಳನ್ನು ತಮ್ಮ ಬರವಣಿಗೆಯ ಮೂಲಕ ಜನರಿಗೆ ತಲುಪಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಅವರು ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡಿದರು ಎಂದರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಮಾತನಾಡಿ, ಗೋಪಾಲ ಕೃಷ್ಣ ಅಡಿಗರು ಯುಗ ಪ್ರಜ್ಞೆಯ ಕವಿ. ನವ್ಯ ಪ್ರಕಾರಗಳನ್ನು ಜನಮನಗಳಿಗೆ ತಲುಪಿಸಿದ ಅವರ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಾಹಿತ್ಯದ ಬಗೆಗೆ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ 35 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಫೆಮಿನಾ ಮಿಸ್ ಇಂಡಿಯಾ -2026 ಗೆದ್ದ ಸಾಧ್ವಿ ಸತೀಶ್ ಸೈಲ್ ಅಭಿನಂದಿಸಿದ ಸಿಎಂ

ಬೆಂಗಳೂರು, ಮೇ 8: ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ "ಫೆಮಿನಾ ಮಿಸ್...

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪಾಂಡುರಂಗ ಪೈ ಸಿದ್ದಾಪುರ

ಸಿದ್ಧಾಪುರ, ಮೇ 8: ಮಕ್ಕಳು ಪ್ರತಿದಿನವೂ ಶ್ರದ್ಧೆ, ದೃಢಸಂಕಲ್ಪ, ಕಾರ್ಯ ತತ್ಪರತೆಯಿಂದ...

ಸಂಚಾರ ಸ್ಥಗಿತಗೊಳಿಸಿರುವ ಬಸ್‌ಗಳ ಮಾಹಿತಿ ನೀಡಲು ಸೂಚನೆ

ಉಡುಪಿ, ಮೇ 8: ಜಿಲ್ಲೆಯ ವಿವಿಧ ಭಾಗಗಳಿಗೆ ಪರವಾನಿಗೆ ಹೊಂದಿ ಈಗಾಗಲೇ...

ನೂರಕ್ಕೆ ನೂರು ಅಂಕ ಪಡೆದ 54 ವಿದ್ಯಾರ್ಥಿಗಳಿಗೆ ಕಸಾಪ ಗೌರವ

ಉಡುಪಿ, ಮೇ 8: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ...
error: Content is protected !!