Friday, February 27, 2026
Friday, February 27, 2026

ಕರ್ಣಾಟಕ ಬ್ಯಾಂಕ್ ವತಿಯಿಂದ ವಿಶ್ವೇಶತೀರ್ಥ ವಿದ್ಯಾಲಯಕ್ಕೆ ಬಸ್ ಹಸ್ತಾಂತರ

ಕರ್ಣಾಟಕ ಬ್ಯಾಂಕ್ ವತಿಯಿಂದ ವಿಶ್ವೇಶತೀರ್ಥ ವಿದ್ಯಾಲಯಕ್ಕೆ ಬಸ್ ಹಸ್ತಾಂತರ

Date:

ಉಡುಪಿ, ಮಾ.6: ಕರ್ಣಾಟಕ ಬ್ಯಾಂಕ್ ತಮ್ಮ ಪ್ರಾದೇಶಿಕ ಕಚೇರಿ ಉಡುಪಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಉಡುಪಿಯ ಕೈಪುಂಜಾಲ್ ಕಾಪು ವಿಶ್ವೇಶತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್ ಅನ್ನು ಹಸ್ತಾಂತರಿಸಿದರು. ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದಲ್ಲದೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಾಜದ ಬೆಳೆವಣಿಗೆಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ ಎಂದರು. ಕರ್ಣಾಟಕ ಬ್ಯಾಂಕಿನ ಜಿ.ಎಂ ವಿನಯ್ ಭಟ್, ಶಾಲಾ ಸಮಿತಿಯ ಅಧ್ಯಕ್ಷರಾದ ಸತೀಶ್ ಕುಮಾರ್, ಪಿ ರಾಮದಾಸ್ ಮಾದಮಣ್ಣಾಯ, ಮಾಲಕರು ಮೆಸರ್ಸ್ ಎಸ್ ಡಿಸೈನರ್ಸ್ ಲಿಮಿಟೆಡ್ ಬೆಂಗಳೂರು, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ (ಎ.ಜಿ.ಎಂ) ವಾದಿರಾಜ್ ಭಟ್ ಕೆ., ಡೆಪ್ಯುಟಿ ರೀಜನಲ್ ಹೆಡ್ ಮನೋಜ್ ಕೋಟ್ಯಾನ್, ಚೀಫ್ ಮ್ಯಾನೇಜರ್ ಪ್ರದೀಪ್ ಕುಮಾರ್, ಸ್ಥಳೀಯ ಶಾಖಾ ಪ್ರಬಂಧಕರು ಹಾಗೂ ಪ್ರಾದೇಶಿಕ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಿರಿಯಡಕ: ಉದ್ಯೋಗ ಮೇಳ

ಹಿರಿಯಡಕ, ಫೆ.27: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಮಾಹಿತಿ...

ಹಲವಾರು ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಒಪ್ಪಂದ

ನವದೆಹಲಿ, ಫೆ.27: ಭಾರತ ಮತ್ತು ಇಸ್ರೇಲ್ ಸಾಂಸ್ಕೃತಿಕ ವಿನಿಮಯ, ಭೂಭೌತಿಕ ಪರಿಶೋಧನೆ,...

90,000 ಕೋಟಿ ರೂಪಾಯಿಗಳ ಒಪ್ಪಂದಗಳಿಗೆ ಜಪಾನ್ ಕಂಪನಿಗಳೊಂದಿಗೆ ಉತ್ತರ ಪ್ರದೇಶ ಸರ್ಕಾರ ಸಹಿ

ಯು.ಬಿ.ಎನ್.ಡಿ., ಫೆ.27: ಉತ್ತರ ಪ್ರದೇಶ ಸರ್ಕಾರವು ಜಪಾನಿನ ವಿವಿಧ ಕಂಪನಿಗಳೊಂದಿಗೆ 90...

ಎನ್.ಸಿ.ಪಿ. ರಾಷ್ಟ್ರೀಯ ಅಧ್ಯಕ್ಷರಾಗಿ ಸುನೇತ್ರಾ ಪವಾರ್ ಆಯ್ಕೆ

ಮುಂಬಯಿ, ಫೆ.27: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ.) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ...
error: Content is protected !!