ಕೋಟ, ಮಾ.5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಬೇಳೂರು ಬಿ. ಒಕ್ಕೂಟದ ದೇಲಟ್ಟು ಶ್ರೀ ನಾಗಯಕ್ಷಿ ದೇವಸ್ಥಾನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ರೂ. 25,000 ಡಿ.ಡಿ ಅನ್ನು ತಾಲೂಕಿನ ಯೋಜನಾಧಿಕಾರಿ ನಾರಾಯಣ ಪಾಲನ್ ದೇವಸ್ಥಾನ ಸಮಿತಿ ಕೋಶಾಧಿಕಾರಿ ರಾಧಾ ಇವರಿಗೆ ಹಸ್ತಾಂತರಿಸಿದರು. ಮೇಲ್ವಿಚಾರಕಿ ರಾಧಿಕಾ, ವಲಯಾಧ್ಯಕ್ಷ ಸುಕುಮಾರ ಶೆಟ್ಟಿ, ಸದಸ್ಯರಾದ ಶಿವಕುಮಾರ್, ಸುರೇಶ ಮರಕಾಲ, ಬೇಬಿ ಶೆಡ್ತಿ, ನಿಶಾ, ಗಿರಿಜ, ಹಿಮವಂತ, ಪಾರ್ವತಿ, ಮಂಜುನಾಥ, ಪ್ರಶಾಂತ್ ಶೆಟ್ಟಿ, ಸೇವಾ ಪ್ರತಿನಿಧಿಯವರಾದ ಶಿವಾನಿ ಮತ್ತು ಉಷಾ ಮುಂತಾದವರು ಉಪಸ್ಥಿತರಿದ್ದರು.




By
ForthFocus™