ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಯೋಗಗುರುಕುಲ ಇದರ ವಿದ್ವಾನ್ ಡಾ. ವಿಜಯ ಮಂಜರ್ ಪಾಂಡೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯಚಂದ್ರ ಆಚಾರ್ಯ ಸಾಸ್ತಾನ ಇವರನ್ನು ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕಲಾವಿದೆ ದೀಕ್ಷಾ ಎಸ್‌ಎಂ ಬ್ರಹ್ಮಾವರ ಇವರುಗಳನ್ನು ಸನ್ಮಾನಿಸಲಾಯಿತು. ಶ್ರೀ ಮಾಲ್ತಿದೇವಿ ದೇವಸ್ಥಾನ ಕಚ್ಚೂರು ಧರ್ಮದರ್ಶಿ ಗೋಕುಲದಾಸ್ ಬಾರ್ಕೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಲ್ತಿದೇವಿ ದೇಗುಲದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರ್ಕೂರು, ಉಪಾಧ್ಯಕ್ಷ ವಾಸುದೇವ ಹಂಗಾರಕಟ್ಟೆ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಉಪಸ್ಥಿತರಿದ್ದರು. ಮಂದಿರದ ಅಧ್ಯಕ್ಷರಾದ ದಿನಕರ್ ಸ್ವಾಗತಿಸಿ, ಸುನೀಲ್ ಪೂಜಾರಿ ನಿರೂಪಿಸಿ ವಂದಿಸಿದರು.
ಭಜನಾ ಮಂಗಲೋತ್ಸವ

ಭಜನಾ ಮಂಗಲೋತ್ಸವ
Date: