ಕೋಟ, ಫೆ.17: ಟೀಮ್ ಭವಾಬ್ಧಿ ಪಡುಕರೆ ಸಂಸ್ಥೆಯ ಭವಾಬ್ಧಿ ೨೦೨೫ ಕಾರ್ಯಕ್ರಮ ಮಾರ್ಚ್ ೧೫ರಂದು ಕೋಟತಟ್ಟು ಪಡುಕರೆಯಲ್ಲಿ ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಪತ್ರಿಕೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಟೀಮ್ ಭವಾಬ್ಧಿ ಪಡುಕರೆ ಅಧ್ಯಕ್ಷ ಸಂತೋಷ, ನಾಲ್ಕನೆಯ ವರ್ಷದ ಸಂಭ್ರಮದ ವೇದಿಕೆಯಲ್ಲಿ ರಾಜ್ಯ ಕಂಡ ಖ್ಯಾತ ಮುಳುಗುತಜ್ಞ ಆಪತ್ಭಾಂದವ ಈಶ್ವರ್ ಮಲ್ಪೆ ಅವರಿಗೆ ಸನ್ಮಾನ ನೆರವೇರಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ರಾಜ್ಯಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಮಂಗಳೂರು ಅಭಿನಯಿಸುವ ಪರಮಾತ್ಮ ಪಂಜುರ್ಲಿ ಕನ್ನಡ ನಾಟಕ, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ವಿವಿಧ ನೃತ್ಯಾವಳಿ, ಮಾರಣಕಟ್ಟೆ ಕಾರಣಿಕದ ಬಿಡುವನೆ ಬ್ರಹ್ಮಲಿಂಗ ಪ್ರಸಿದ್ಧ ನೃತ್ಯರೂಪಕ, ಸ್ಥಳೀಯ ಪ್ರತಿಭಾನ್ವಿತ ನೃತ್ಯಪಟುಗಳಿಂದ ನೃತ್ಯ ಸಿಂಚನ, ಕರಾವಳಿಯ ಹೆಸರಾಂತ ಗಾಯಕರಿಂದ ಸಂಗೀತ ರಸಮಂಜರಿ, ಪ್ರತಿಭಾ ಪುರಸ್ಕಾರ, ವಿವಿಧ ಸಾಂಸ್ಕೃತಿಕ ಹಾಗು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಕಾರ್ಯದರ್ಶಿ ಸಂದೇಶ ಅಮೀನ್, ಸದಸ್ಯರಾದ ದರ್ಶನ್ ಪೂಜಾರಿ, ದರ್ಶನ್ ಬಂಗೇರ ಮುಂತಾದವರು ಉಪಸ್ಥಿತರಿದ್ದರು.