Saturday, February 22, 2025
Saturday, February 22, 2025

ಬಾರಿಕೆರೆ ಯುವಕ ಮಂಡಲ: ಕ್ರಿಕೆಟ್ ಪಂದ್ಯಾಟ; ಅಶಕ್ತರಿಗೆ ಸಹಾಯಹಸ್ತ

ಬಾರಿಕೆರೆ ಯುವಕ ಮಂಡಲ: ಕ್ರಿಕೆಟ್ ಪಂದ್ಯಾಟ; ಅಶಕ್ತರಿಗೆ ಸಹಾಯಹಸ್ತ

Date:

ಕೋಟ, ಫೆ.17: ಬಾರಿಕೆರೆ ಯುವಕ ಮಂಡಲ ಕೋಟ ವತಿಯಿಂದ ೨೪ನೇ ವರ್ಷೋತ್ಸವ ಸಂಭ್ರಮದ ಅಂಗವಾಗಿ ಬಾರಿಕೆರೆ ಪ್ರೀಮಿಯರ್ ಲೀಗ್ ೨೦೨೫ ೬೦ ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಡೆಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು. ಮಾಜಿ ಜಿಲ್ಲಾ ಪಂಚಾಯತ್‌ನ ಸದಸ್ಯರಾದ ರಾಘವೇಂದ್ರ ಕಾಂಚನ್ ಬಾರಿಕೆರೆ, ಕೋಟತಟ್ಟು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವಡ, ಕೋಟ ಸಿಎ ಬ್ಯಾಂಕಿನ ನಿರ್ದೇಶಕರಾದ ರಂಜಿತ್ ಕುಮಾರ್ ಬಾರಿಕೆರೆ, ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ, ಸಂಸ್ಥೆಯ ಮಾಜಿ ಗೌರವಾಧ್ಯಕ್ಷ ಸಿರಾಜ್ ಸಾಹೇಬ್, ಮಾಜಿ ಅಧ್ಯಕ್ಷರಾದ ರತ್ನಾಕರ ಬಾರಿಕೆರೆ, ಅವಿನಾಶ ಬಾರಿಕೆರೆ, ಪ್ರಧಾನ ಕಾರ್ಯದರ್ಶಿ ಪವನ ಕುಂದರ್ ಬಾರಿಕೆರೆ, ಮುಕ್ತೇರ್ ಸಾಹೇಬ್, ರವೀಂದ್ರ ಕಾಂಚನ್ ಬಾರಿಕೆರೆ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ಕೋಟ ಸಿ.ಎ ಬ್ಯಾಂಕಿನ ಚುನಾವಣೆಯಲ್ಲಿ ಜಯ ಗಳಿಸಿದ ರಂಜಿತ್ ಕುಮಾರ್ ಬಾರಿಕೆರೆಯವರನ್ನು ಸನ್ಮಾನಿಸಲಾಯಿತು.

ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವನ್ನು ರಾಘವೇಂದ್ರ ಕಾಂಚನ್ ಬಾರಿಕೆರೆ ಮಾಲಕತ್ವದ ತಂಡ ಬಾರಿಕೆರೆ ಬೂಶ್ ರೇಂಜರ್ಸ್ ತಂಡ ಜಯ ಗಳಿಸಿತು. ದ್ವಿತೀಯ ಬಹುಮಾನವನ್ನು ರವಿ ಕುಂದರ್ ಮಾಲಕತ್ವದ ತಂಡ ಬಾರಿಕೆರೆ ಸೂಪರ್ ಕಿಂಗ್ಸ್ ತಂಡ ಜಯ ಗಳಿಸಿತು. ಪ್ರತಾಪ ಬಾರಿಕೆರೆ ಸ್ವಾಗತಿಸಿ, ಪ್ರಮೋದ್ ಆಚಾರ್ಯ ಬಾರಿಕೆರೆ ವಂದಿಸಿದರು. ಪ್ರದೀಪ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಡ್ವಕೇಟ್‌ ಡಿ. ಕೆ. ಶೆಟ್ಟಿ ನೋಟರಿ ಪಬ್ಲಿಕ್‌ ಆಗಿ ನೇಮಕ

ಮುಂಬಯಿ, ಫೆ.21: ಮುಂಬಯಿಯ ಹಿರಿಯ ವಕೀಲ ಅಡ್ವಕೇಟ್‌ ಡಿ. ಕೆ. ಶೆಟ್ಟಿ...

ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ಅಧಿಕಾರಿಗಳೊಂದಿಗೆ ಸಭೆ

ಉಡುಪಿ, ಫೆ.21: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಿಸುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ...

ಆಗಮಡಂಬರ ಕೃತಿ ಲೋಕಾರ್ಪಣೆ

ಉಡುಪಿ, ಫೆ.21: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ...

ವಿಕಾಸಕ್ಕಾಗಿ ಜಾನಪದ

ಉಡುಪಿ, ಫೆ.21: ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ...
error: Content is protected !!