ಕೋಟ, ಫೆ.16: ಮಾನವ ಜನ್ಮ ಎಲ್ಲಾ ಜೀವಿಗಳಿಗಿಂತ ಶ್ರೇಷ್ಢವಾದದ್ದು ಅದನ್ನು ಈ ಸಮಾಜದಲ್ಲಿ ಸದ್ವಿನಿಯೋಗ ಸಮರ್ಪಕಗೊಳಿಸಿಕೊಳ್ಳಬೇಕು ಎಂದು ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿದರು. ಶನಿವಾರ ಕೋಟದ ಶ್ರೀ ಶಾಂತಮೂರ್ತಿ ಶನೀಶ್ವರ ದೇಗುಲದ ನೂತನ ಸಭಾಭವನ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು. ಪಾಕಶಾಲೆಯನ್ನು ಉದ್ಯಮಿ ಡಾ.ಗೋವಿಂದಬಾಬು ಪೂಜಾರಿ ಉದ್ಘಾಟಿಸಿದರು. ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ದೇಗುಲದ ಧರ್ಮದರ್ಶಿ ಕೆ.ಭಾಸ್ಕರ್ ಸ್ವಾಮಿ ವಹಿಸಿದ್ದರು. ದೇಗುಲದ ಸಭಾಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಆನಂದ್ ಸಿ ಕುಂದರ್, ಡಾ.ಗೋವಿಂದಬಾಬು ಪೂಜಾರಿ, ದೇಗುಲದಲ್ಲಿ ಕಾರ್ಯನಿರ್ವಹಿಸುವ ಗೌರಿ ಅಜ್ಜಿ ಇವರುಗಳನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮುಜರಾಯಿ ಇಲಾಖೆಯ ಆಪ್ತ ಸಹಾಯಕ ಶಂಕರ್ ಶೆಟ್ಟಿ, ಜನತಾ ಸಂಸ್ಥೆ ನಿರ್ದೇಶಕ ಪ್ರಶಾಂತ್ ಎ ಕುಂದರ್, ಉದ್ಯಮಿ ಸತೀಶ್ ಶೆಟ್ಟಿ, ಕೆ.ಆರ್ ನಾಯಕ್, ನೇರಳಕಟ್ಟೆ ಗಿರಿ ಕ್ಷೇತ್ರದ ಧರ್ಮದರ್ಶಿ ಶಂಕರ್ ಪೈ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್ ಮುಂತಾದವರು ಉಪಸ್ಥಿತರಿದ್ದರು. ಉತ್ಸವ ಸಮಿತಿಯ ಪ್ರಮುಖ ದಿನೇಶ್ ಗಾಣಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ್ ನಿರೂಪಿಸಿದರು. ದೇಗುಲದ ಪ್ರಧಾನ ಅರ್ಚಕ ಜಯರಾಜ ಸಾಲಿಯಾನ್ ವಂದಿಸಿದರು. ಶ್ರೀಕಾಂತ್ ಕದ್ರಿಕಟ್ಟು, ಪ್ರವೀಣ್ ಕುಂದರ್ ಸಹಕರಿಸಿದರು.