Thursday, February 20, 2025
Thursday, February 20, 2025

ಕೋಟಿ-ಚೆನ್ನಯ್ಯರ ನಡೆ ನುಡಿ ಶಾಶ್ವತ: ಸಂಗೀತಾ ಕುಲಾಲ್

ಕೋಟಿ-ಚೆನ್ನಯ್ಯರ ನಡೆ ನುಡಿ ಶಾಶ್ವತ: ಸಂಗೀತಾ ಕುಲಾಲ್

Date:

ಗಣಿತನಗರ, ಫೆ.16: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯ್ಯರು ಅಧರ್ಮದ ವಿರುದ್ಧ, ನ್ಯಾಯದ ಪರವಾಗಿ ಹೋರಾಡಿದ ವೀರ ಪುರುಷರು. ಹಿರಿಯರಿಗೆ ಗೌರವವನ್ನು, ಶಿಷ್ಟರ ರಕ್ಷಣೆಯನ್ನು ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯ್ಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್-ಬಾಲಸಂಸ್ಕಾರದ ಕಾರ್ಯದರ್ಶಿ ಸಂಗೀತಾ ಕುಲಾಲ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೃಂದದ ಸದಸ್ಯರಾದ ಉಷಾ ರಾವ್ ಯು., ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ಅಕ್ಷತಾ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು. ಬಾಲಸಂಸ್ಕಾರದ ಬಾಲಕ ಬ್ರಿಜೇಶ್ ಕಾರ್ಯಕ್ರಮ ನಿರೂಪಿಸಿ, ಆಯುಶ್ ಯು ಶೆಟ್ಟಿ ವಂದಿಸಿದರು. ಆರಾಧ್ಯ ಶ್ರೀ ರಾಮರಕ್ಷಾ ಸ್ತೋತ್ರವನ್ನು ಹಾಗೂ ಪ್ರೇರಣಾ ಬೋರ್ಕರ್ ಭಗವದ್ಗೀತೆಯ ಮೊದಲ ಹತ್ತು ಶ್ಲೋಕವನ್ನು ವಾಚಿಸಿದರು. ಬಾಲ ಸಂಸ್ಕಾರಕ್ಕೆ ಸೇರಲಿಚ್ಚಿಸುವ ಕಾರ್ಕಳ ತಾಲೂಕಿನ ಮಕ್ಕಳ ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ ಮಕ್ಕಳ ಹೆಸರನ್ನು ಈ ತಿಂಗಳ 28ನೇ ತಾರಿಕಿನೊಳಗಾಗಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9902192469 ಸಂಪರ್ಕಿಸಬಹುದು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೇಖಾ ಗುಪ್ತಾ ದೆಹಲಿಯ ಮುಖ್ಯಮಂತ್ರಿ

ನವದೆಹಲಿ, ಫೆ.19: ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ (ಫೆಬ್ರವರಿ 19)...

ಫೆ.21: ಬ್ರಹ್ಮಗಿರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಫೆ.19: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಮತ್ತು ಉಡುಪಿ ಜಿಲ್ಲಾ...

ವೈದ್ಯಾಧಿಕಾರಿಗಳಿಗೆ ತಾಯಿ ಹಾಗೂ ಮಕ್ಕಳ ಆರೋಗ್ಯ ನಿರ್ವಹಣೆ ತರಬೇತಿ ಕಾರ್ಯಗಾರ

ಉಡುಪಿ, ಫೆ.19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಶಿವಾಜಿಯ ಜೀವನ ಚರಿತ್ರೆ ಮಾದರಿಯಾಗಲಿ: ಶಾಸಕ ಯಶ್ಪಾಲ್ ಎ ಸುವರ್ಣ

ಉಡುಪಿ, ಫೆ.19: ಛತ್ರಪತಿ ಶಿವಾಜಿಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ತತ್ವಗಳು...
error: Content is protected !!