ಕೋಟ: ಸಾಧಕರ ಸಾಧನೆಗಳು ಮುಖ್ಯವಾಹಿನಿಗೆ ಬಂದು ಅವರ ಸಾರ್ಥಕ ಬದುಕು ಅನಾವರಣಗೊಂಡು ಯುವ ಪ್ರತಿಭೆಗಳಿಗೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ತಿಂಗಳು ದತ್ತಿ ಪುರಸ್ಕಾರದ ಮೂಲಕ ಕಾರಂತ ಥೀಮ್ ಪಾರ್ಕ್ನಲ್ಲಿ ಸಾಧಕರ ನೆನಪುಗಳನ್ನು ಶಾಶ್ವತವಾಗಿಸುವುದರ ಜೊತೆಗೆ ಹೊಸ ಹೊಸ ಪ್ರತಿಭೆಗಳ ಅನಾವರಣವಾಗಲು ವೇದಿಕೆಯಾಗಿರುವುದು ಶ್ಲಾಘನೀಯ ಎಂದು ಮಹಾಲಿಂಗೇಶ್ವರ ದೇವಸ್ಥಾನ ಮಣೂರು ಧರ್ಮದರ್ಶಿ ಸತೀಶ್ ಎಚ್ ಕುಂದರ್ ಹೇಳಿದರು.
ಅವರು ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಯಕ್ಷ ಕಿನ್ನರ ಕೋಟ ವೈಕುಂಠ ದತ್ತಿ ಪುರಸ್ಕಾರ ಪ್ರದಾನ ಹಾಗೂ ನಾಟ್ಯ ವೈಭವ ಕಾರ್ಯಕ್ರಮ ವಲ್ಲರಿ-2022 (ಪ್ರತಿಭೆಯ ಗೊಂಚಲು) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉದಾಯ್ ಕುಮಾರ್ ಹೊಸಾಳ್ ಅವರು ದತ್ತಿ ಪುರಸ್ಕಾರದ ಮೂಲಕ ನಮ್ಮಂತಹ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದಕ್ಕಾಗಿ
ಸಂಘಟನೆಯವರಿಗೆ ಧನ್ಯವಾದಗಳು, ಇನ್ನಷ್ಟು ಸಾಧಕರನ್ನು
ಸಮಾಜಕ್ಕೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ರವಿ ಶೆಟ್ಟಿ ತಂತ್ರಾಡಿ ಅವರು ನಾನು ಮತ್ತು ಕವನ ಎಂಬ ವಿಷಯಾಧರಿತ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಯಕ್ಷ ಸಂಘಟಕರಾದ ರಾಜಶೇಖರ್ ಹೆಬ್ಬಾರ್, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್, ದಿ.ಕೋಟ ವೈಂಕುಠ ಅವರ ಸುಪುತ್ರಿ
ಮಾಲಿನಿ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರ್ ವಂದಿಸಿದರು. ಟ್ರಸ್ಟಿ ಸತೀಶ್ ವಡ್ಡರ್ಸೆ ನಿರೂಪಿಸಿದರು.