Home ಸುದ್ಧಿಗಳು ಪ್ರಾದೇಶಿಕ ತೆಂಕನಿಡಿಯೂರು ಕಾಲೇಜು: ಕಾರ್ಪೋರೇಟ್ ತರಬೇತಿ

ತೆಂಕನಿಡಿಯೂರು ಕಾಲೇಜು: ಕಾರ್ಪೋರೇಟ್ ತರಬೇತಿ

160
0

ತೆಂಕನಿಡಿಯೂರು, ಏ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಐಕ್ಯೂಎಸಿ ಮತ್ತು ಉದ್ಯೋಗ ಮಾಹಿತಿ ಘಟಕ ಇದರ ಸಹಯೋಗದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ‘ಎ ಜರ್ನಿ ಫ್ರಮ್ ಕಂಪನಿ ಟು ಕಾರ್ಪೋರೇಟ್’ ಎಂಬ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಚಂದನ್ ರಾವ್, ಸಾಫ್ಟ್ ಸ್ಕಿಲ್ ಟ್ರೈನರ್ ಹಾಗೂ ಫ್ರೀಲ್ಯಾನ್ಸ್ ಕನ್ಸಲ್ಟೆಂಟ್ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಮೂಡಿಸುವುದರೊಂದಿಗೆ ಕಾರ್ಪೋರೇಟ್ ವಲಯದಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ಮತ್ತು ಜ್ಞಾನ ಹೇಗೆ ಪಡೆಯಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು. ಸಂದರ್ಶನ ಎದುರಿಸುವ ಬಗೆ, ರೆಸ್ಯೂಮ್ ಬರೆಯುವ ವಿಧಾನ, ಗುಂಪು ಸಂದರ್ಶನದ ನಿಯಮಗಳು ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಸಮೂಹ ಚರ್ಚೆ ಮತ್ತು ಅಣಕು ಸಂದರ್ಶನವನ್ನು ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಮಾಹಿತಿ ಘಟಕದ ಸಂಚಾಲಕರಾದ ದಿನೇಶ್ ಎಂ. ಕಾರ್ಯಾಗಾರವನ್ನು ಸಂಯೋಜಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಬಿಂದು ಟಿ., ವ್ಯವಹಾರ ಅಧ್ಯಯನಶಾಸ್ತ್ರ ಮುಖ್ಯಸ್ಥರಾದ ಡಾ. ರಘು ನಾಯ್ಕ, ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಾ ಎನ್. ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಶ್ರದ್ಧಾ ಸ್ವಾಗತಿಸಿ, ಶ್ರೇಯಾ ಪರಿಚಯಿಸಿ, ಅನನ್ಯ ವಂದಿಸಿದರು. ಅಂತಿಮ ಬಿ.ಬಿ.ಎ. ವಿದ್ಯಾರ್ಥಿ ನಿತೀಶ್ ಜಿ. ಅಂಚನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.