ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಪದಾಧಿಕಾರಿಗಳ ಸಭೆಯು ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಹಿಂದುಳಿದ ವರ್ಗಗಳನ್ನು ಸಂಘಟಿಸಿ ಬಲಪಡಿಸುವ ಅಗತ್ಯ ಇದೆ.
ಕಾಂಗ್ರೆಸ್ ಪಕ್ಷದಿಂದ ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಏರ್ಪಾಡು ಮಾಡಲಾಗುವುದು. ಹಿಂದುಳಿದ ವರ್ಗದ ಕಾಂಗ್ರೆಸ್ ಕಾರ್ಯಕರ್ತರು ಸದಸ್ಯರನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಸಮಿತಿಯ ಅಧ್ಯಕ್ಷರಾದ ಎಂ.ಡಿ. ಲಕ್ಷ್ಮೀನಾರಾಯಣರವರು ಮಾತನಾಡಿ ಪ್ರತಿಯೊಬ್ಬರಿಗೂ ಪ್ರತೀ ಜಾತಿಗೂ ಹಿಂದುಳಿದ ಸಮಿತಿಯಲ್ಲಿ ಪ್ರಾಧ್ಯಾನ್ಯತೆ ನೀಡಲಾಗಿದೆ.
ಮೊದಲು ಜಾತಿ ಜನಾಂಗದ ಬಗ್ಗೆ ಮಾಹಿತಿ ಇರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿವರ ಪಡೆಯುವ ಸಮಿತಿ ರಚಿಸಿದ್ದರು. ಆದರೆ ಈಗಿನ ಸರಕಾರ ಈ ವರದಿ ಸ್ವೀಕಾರ ಮಾಡಿಲ್ಲ ನಮ್ಮ ವಿನಂತಿಗೂ ಬೆಲೆ ಕೊಡಲಿಲ್ಲ ಎಂದರು.
ಜಿಲ್ಲಾ ಸಮಾವೇಶ ಮಾಡುವ ಬಗ್ಗೆ ಪ್ರತಿಕ್ರಿಯಿಸುತ್ತಾ ಜಿಲ್ಲಾ ಸಮಾವೇಶ ಮಾಡುವುದಾದರೆ ರಾಜ್ಯ ನಾಯಕರನ್ನು ತಾವೇ ಕರೆ ತರುವುದಾಗಿ ಆಶ್ವಾಸನೆಯಿತ್ತರು. ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ನಿಷ್ಕ್ರಿಯವಾಗಿದೆ. ಜನರಿಗೆ ಸರಕಾರದ ಮೇಲೆ ಭರವಸೆ ಕಡಿಮೆಯಾಗಿದೆ. ಚುನಾವಣೆ ನಡೆಸಲು ಬಿಜೆಪಿಗೆ ನಡುಕ ಹುಟ್ಟಿದೆ.
25 ವಿಭಾಗಗಳು ಸೇರಿ ಬೂತ್ ಸಮಿತಿ ರಚನೆ ಆಗಬೇಕು. ನಾವು ಗೆಲ್ಲಲೇಬೇಕು ಅಲ್ಲಿಯ ತನಕ ವಿಶ್ರಮಿಸುವುದು ಬೇಡ ಎಂದರು. ಸದಸ್ಯತ್ವ ನೋಂದಣಿ ಅಭಿಯಾನವನ್ನು ಮಾಡಿ ಘಟಕಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಸಿ ಎರಡನೇ
ಹಂತದ ಕಾರ್ಯಕರ್ತರಿಗೂ ಪ್ರಾಮುಖ್ಯತೆ ಸಿಗಬೇಕು ಎಂದರು.
ರಾಜ್ಯ ಹಿಂದುಳಿದ ವರ್ಗ ಘಟಕದ ಉಪಾಧ್ಯಕ್ಷರಾದ ತುಕರಾಂ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಬಿ. ಎಲ್. ಹರೀಶ್, ದ.ಕ. ಜಿಲ್ಲಾ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್ ಸಂದರ್ಭೋಚಿತವಾಗಿ ಮಾತನಾಡಿದರು.
ಹಿಂದುಳಿದ ವರ್ಗ ಘಟಕದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ಸಂಕಪ್ಪ ಎ. ಅವರು ಸ್ವಾಗತಿಸಿ, ಹಿಂದುಳಿದ ವರ್ಗ ಘಟಕದ ರಾಜ್ಯ ಕಾರ್ಯದರ್ಶಿ ಶಿವಾಜಿ ಸುವರ್ಣ ವಂದಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರ, ಬ್ಲಾಕ್ ಅಧ್ಯಕ್ಷರುಗಳಾದ ದಿನಕರ್ ಹೇರೂರು, ರಮೇಶ್ ಕಾಂಚನ್, ಹಿಂದುಳಿದ ವರ್ಗ ಘಟಕದ ಪದಾಧಿಕಾರಿಗಳಾದ ಮಣಿಕಂಠ, ದಿನೇಶ್ ಬಂಗೇರ, ಮಂಜುನಾಥ ಪೂಜಾರಿ, ಶ್ರೀನಿವಾಸ ಶೆಟ್ಟಿಗಾರ್, ಮಹಾಬಲ ಮಡಿವಾಳ, ಎ.ಪಿ. ರಾಜು ಪೂಜಾರಿ, ಮೋಹನ್ ಪೂಜಾರಿ ಗಿಳಿಯಾರು, ಶ್ರೀಕುಮಾರ್, ಲಕ್ಷೀಶ್ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಸುಲೋಚನಾ, ಅನುಷಾ, ಮೊದಲಾದವರು ಉಪಸ್ಥಿತರಿದ್ದರು.