ಉಡುಪಿ: ಪದವಿಯೊಂದಿಗೆ ಇಂದಿನ ವೃತ್ತಿ ಜೀವನಕ್ಕೆ ಮೃದು ಕೌಶಲ್ಯಗಳು ಅತಿ ಮುಖ್ಯ. ಕೌಶಲ್ಯಗಳ ಅಭಿವೃದ್ಧಿಯೇ ನಿಜವಾದ ವ್ಯಕ್ತಿ ವಿಕಸನ ಎಂದು ಸಂಪನ್ಮೂಲ ವ್ಯಕ್ತಿಗಳಾದ ಸಾಂಗವಿ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ವಾಣಿಜ್ಯಶಾಸ್ತ್ರ ವಿಭಾಗ ಇಲ್ಲಿ ಮೃದು ಕೌಶಲ್ಯ ಮತ್ತು ವೃತ್ತಿ ವಿಕಸನ ಪೂರಕ ಕೋರ್ಸಿನ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ ಪಠ್ಯದೊಂದಿಗೆ ಈ ರೀತಿಯ ಪೂರಕ ಕೋರ್ಸುಗಳು ವಿದ್ಯಾರ್ಥಿಗಳ ವ್ಯಕ್ತಿ ವಿಕಸನಕ್ಕೆ ಅತಿ ಅಗತ್ಯ ಎಂದರು.
ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಟಿ.ಜಿ. ಭಟ್ ಶುಭ ಹಾರೈಸಿದರು. ಸಹ ಪ್ರಾಧ್ಯಾಪಕಿ ಡಾ. ಮೇವಿ ಮಿರಾಂದ ಪ್ರಸ್ತಾವಿಕ ಮಾತುಗಳನ್ನಾಡಿದರು. ಐ.ಕ್ಯೂ.ಎ.ಸಿ ಸಂಚಾಲಕ ಡಾ. ಸುರೇಶ್ ರೈ ಕೆ, ಸಹ ಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ., ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಪ್ರೊ. ಉಮೇಶ್ ಪೈ ಸಂಪನ್ಮೂಲ ವ್ಯಕ್ತಿಗಳಾದ ಶ್ರೇಯಾ, ವಿದ್ಯಾಶ್ರೀ ಮತ್ತು ರಂಜಿತ ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳಾದ ರೀನಾ ಸ್ವಾಗತಿಸಿ, ಜಾಸ್ಮಿನ್ ವಂದನಾರ್ಪಣೆಗೈದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.