ಬ್ರಹ್ಮಾವರ, ಸೆ. 17: ಆಹಾರದಲ್ಲಿ ಇರುವ ಪೋಷಕಾಂಶದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಲು ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಆಹಾರ ತಂತ್ರಜ್ಞಾನ ವಿಭಾಗದ ವತಿಯಿಂದ ಸೆಪ್ಟೆಂಬರ್ ಮಾಸದ ಪೋಷಣ ಮಾಸಾಚರಣೆಯನ್ನು ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ಸೆಪ್ಟೆಂಬರ್ ಮಾಸವನ್ನು ರಾಷ್ಟ್ರೀಯ ಪೋಷಣಾ ಮಾಸವೆಂದು ಆಚರಿಸಲಾಗುತ್ತದೆ. ಸಿರಿಧಾನ್ಯಗಳ ಬಳಕೆ ಅದರ ಉಪಯೋಗ ಅರಿವು ಇದರ ಮುಖ್ಯ ಉದ್ದೇಶವಾಗಿದೆ.
ಆಹಾರ ತಂತ್ರಜ್ಞಾನ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ಆಹಾರದಲ್ಲಿನ ಪೋಷಣೆಯ ಕುರಿತಾಗಿ ಸಿರಿಧಾನ್ಯಗಳ ಬಳಕೆಯಿಂದ ಯೋಗ್ಯ ಪೋಷಣೆಯು ದೇಹಕ್ಕೆ ದೊರೆಯುತ್ತದೆ ಎಂಬ ಕುರಿತು ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಸಿರಿ ಧಾನ್ಯಗಳನ್ನು ಬಳಸಿ ಆಹಾರ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆಯನ್ನು ನಡೆಸಲಾಯಿತು.
ಅತಿಥಿಯಾಗಿ ಎಫ್.ಎಸ್.ಎಸ್.ಎ.ಐ ಅಧಿಕಾರಿ ಡಾ. ಪ್ರೇಮಾನಂದ ಕೆ ವಿದ್ಯಾರ್ಥಿಗಳಿಗೆ ಸಿರಿಧಾನ್ಯಗಳ ಮಹತ್ವ ಅದರ ಉಪಯೋಗದ ಕುರಿತು ಮಾಹಿತಿ ನೀಡಿ ಅರಿವು ಮೂಡಿಸಿದರು. ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಳಕೆಯ ಕುರಿತು ಮಾಹಿತಿ ನೀಡಿದರು. ಕಾಲೇಜಿನ ನಿರ್ದೇಶಕಿ ಮಮತಾ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಡಾ. ಸೀಮಾ ಜಿ ಭಟ್ ವಿದ್ಯಾರ್ಥಿಗಳಿಗೆ ಆಹಾರದ ಜಾಗೃತಿಯ ಕುರಿತು, ದಿನನಿತ್ಯದಲ್ಲಿ ಯೋಗಾಭ್ಯಾಸದ ಕುರಿತಾಗಿ ಮಾತನಾಡಿದರು. ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಹೀನಾ ಕೌಸರ್. ಆಹಾರ ತಂತ್ರಜ್ಞಾನ ವಿಭಾಗದ ಉಪನ್ಯಾಸಕರಾದ ವಿನಂತಿ, ಸುಶ್ಮಿತಾ, ಅನ್ಸೀಟಾ ಹಾಗೂ ಎಲ್ಲಾ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿಶ್ಚಿತಾ ಸ್ವಾಗತಿಸಿ, ವಿದ್ಯಾರ್ಥಿನಿ ವೇದಾಶ್ರೀ ವಂದಿಸಿದರು. ಆಹಾರ ತಂತ್ರಜ್ಞಾನ ವಿದ್ಯಾರ್ಥಿ ಪ್ರಾಂಜಲಿ ಕಾರ್ಯಕ್ರಮ ನಿರೂಪಿಸಿದರು.