ಮಣಿಪಾಲ: ಪರ್ಕಳದ ಪಾಟೀಲ್ ಕ್ಲಾತ್ ಸ್ಟೋರ್ ನ ಮುಂಭಾಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸೂರ್ಯಗ್ರಹಣ ವೀಕ್ಷಿಸುವ ಕಾರ್ಯಕ್ರಮ ನಡೆಯಿತು. ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡರಾದ ಪ್ರಸಾದರಾಜ್ ಕಾಂಚನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು,
ವೈಜ್ಞಾನಿಕ ರೀತಿಯಲ್ಲಿ ಗ್ರಹಣ ವೀಕ್ಷಿಸುವ ವಿಧಾನವನ್ನು ಆಯೋಜಿಸಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಮೋಹನದಾಸ್ ನಾಯಕ್ ಪರ್ಕಳ. ಜಯ ಶೆಟ್ಟಿ ಬನ್ನಂಜೆ. ಉಡುಪಿ ಲಯನ್ಸ್ ಕ್ಲಬ್ಬ್ ನ ನಿಕಟಪೂರ್ವ ಅಧ್ಯಕ್ಷರಾದ ವಾದಿರಾಜ್ ರಾವ್ ಶಿರಿಬೀಡು, ಕೇಶವಾನಂದ ಸ್ವಾಮೀಜಿ, ಪಾಟೀಲ್ ಕ್ಲೋತ್ ಸ್ಟೋರ್ ಮಾಲಕರಾದ ಗಣೇಶ್ ಪಾಟೀಲ್, ಟೆಲಿಸ್ಕೋಪ್ ಆವಿಷ್ಕಾರ ಮಾಡಿದ ಆರ್ ಮನೋಹರ್, ಬೆಳ್ಳಿ ಪರದೆಯಲ್ಲಿ ಸೂರ್ಯಗ್ರಹಣದ ಚಿತ್ರಣ ಮಿಂಚುವಂತೆ ಮಾಡಿದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸರಳೇಬೆಟ್ಟು ಸುಹಾಸ್ ಶೆಣೈ, ವಾಲ್ಟರ್ ಡಿಸೋಜ ಕೊಳಲಗಿರಿ, ಹರೀಶ್ ನಾಯ್ಕ್ ಮಾಣೆಬೆಟ್ಟು, ಉಪೇಂದ್ರ ನಾಯ್ಕ್, ರಾಜೇಶ ಪ್ರಭು ಪರ್ಕಳ, ಗಣೇಶ್ ಪೂಜಾರಿ, ಸುಧೀರ್ ಶೆಟ್ಟಿ ಹಿರಿಯಡ್ಕ, ಪ್ರಕಾಶ್ ನಾಯ್ಕ್, ಜಸ್ವಂತ್ ಜೋಗಿ ಪರ್ಕಳ ಮುಂತಾದವರು ಉಪಸ್ಥಿತರಿದ್ದರು. ಗಣೇಶ್ ರಾಜ್ ಸರಳೇಬೆಟ್ಟು ಕಾರ್ಯಕ್ರಮ ಸಂಘಟಿಸಿದರು.